ಪ್ರತಿಪಕ್ಷಗಳ ಕೂಟವನ್ನು ಭ್ರಷ್ಟರ ಕೂಟಕ್ಕೆ ಹೊಲಿಸಿದ ಮೋದಿ

ನವದೆಹಲಿ,ಮಾ.29-ರಾಹುಲ್‍ಗಾಂಧಿ ಅನರ್ಹತೆ ಕುರಿತಂತೆ ಒಗ್ಗಟ್ಟು ಪ್ರದರ್ಶಿಸಿರುವ ಪ್ರತಿಪಕ್ಷಗಳ ಕೂಟವನ್ನು ಭ್ರಷ್ಟರ ಒಗ್ಗೂಡುವಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕೇಂದ್ರೀಯ ಸಂಸ್ಥೆಗಳ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‍ಗೆ ಹೋಗಲು 14 ಪಕ್ಷಗಳ ನಿರ್ಧಾರ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ನಾವು ಸಾಂವಿಧಾನಿಕ ಸಂಸ್ಥೆಗಳ ಬಲವಾದ ಅಡಿಪಾಯವನ್ನು ಹೊಂದಿದ್ದೇವೆ. ಹೀಗಾಗಿಯೇ ಪ್ರತಿಪಕ್ಷಗಳು ಭ್ರಷ್ಟರ ಕೂಟ ರಚಿಸಿಕೊಂಡಿವೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡಾಗ ದಾಳಿ ಮಾಡಲಾಗುತ್ತಿದೆ, ನ್ಯಾಯಾಲಯಗಳಲ್ಲಿ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಕೆಲವು […]

ದ್ವೇಷ ಹರಡುವ ರಾಜಕಾರಣದಿಂದ ಜನ ಬೇಸತ್ತಿದ್ದಾರೆ : ರಾಹುಲ್ ಗಾಂಧಿ

ಫತೇಘರ್ ಸಾಹಿಬ್,ಜ.11- ಬಿಜೆಪಿಯ ಭಯ ಮತ್ತು ದ್ವೇಷ ಹರಡುವ ರಾಜಕಾರಣದಿಂದ ಜನ ಬೇಸರಗೊಂಡಿದ್ದು, ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಿ ಯಶಸ್ಸು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪಂಜಾಬ್‍ನಲ್ಲಿ ಯಾತ್ರೆ ಪ್ರಾರಂಭಿಸುವ ಮೊದಲು ಪತೇಘರ್‍ಸಾಹಿಬ್ ಸಮೀಪದ ಸಿರ್ಹಿಂದ್‍ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ನವರು ದೇಶವನ್ನು ವಿಭಜಿಸಿ, ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು, ಒಂದು ಜಾತಿಯ ವಿರುದ್ಧ ಇನ್ನೊಂದು ಜಾತಿಯನ್ನು, ಒಂದು ಭಾಷೆಯನ್ನು ಇನ್ನೊಂದು ಭಾಷೆಯ ವಿರುದ್ಧ […]