ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಅಪ್ರಾಪ್ತನಿಗೆ ಶಿಕ್ಷೆ

ಕೋಟಾ,ಜ.19- ನೆರೆಮನೆಯಲ್ಲಿ ಸಂಬಂಧಿ ಬಾಲಕನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಅಪರಾಧಕ್ಕಾಗಿ ಅಪ್ರಾಪ್ತನನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದ್ದು, ನೇರವಾಗಿ ಜೈಲಿಗೆ ಕಳುಹಿಸುವ ಬದಲು 20 ವರ್ಷ ತುಂಬುವರೆಗೂ ಕಲ್ಯಾಣ ಕೇಂದ್ರದಲ್ಲಿರುವಂತೆ ಆದೇಶಿಸಿದೆ. ಶಿಕ್ಷೆಗೆ ಒಳಗಾದ ಅಪರಾಧಿಗೆ ಪ್ರಸ್ತುತ 18 ವರ್ಷಗಳಾಗಿವೆ. ಆತನಿಗೆ 20 ವರ್ಷ ತುಂಬುವವರೆಗೂ ಬಾಲಾಪರಾಧಿಗಳನ್ನು ಇರಿಸುವ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಶಿಕ್ಷೆಯ ಜೊತೆಗೆ 20,000 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಇನ್ನೂ ಆರು ತಿಂಗಳು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ […]