ಪೊಲೀಸ್ ಆ್ಯಪ್ ಅಪ್‍ಡೆಟ್ ಮಾಡಿಕೊಳ್ಳಲು ಸಲಹೆ

ಬೆಂಗಳೂರು,ಫೆ.7- ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸಲು ಕರ್ನಾಟಕ ಪೊಲೀಸ್‍ನ ಕೆಎಸ್‍ಪಿ ಆ್ಯಪ್ ಬಳಸಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ದಂಡ ಪಾವತಿಯಷ್ಟೆ ಅಲ್ಲ ಪೊಲೀಸ್ ಇಲಾಖೆಯ ಆ್ಯಪ್‍ನಲ್ಲಿ ಹಲವು ಪ್ರಯೋಜನಗಳಿವೆ. ಕೆಎಸ್‍ಪಿ ಹೆಸರಿನ ಈ ಆ್ಯಪ್ ಅನ್ನು ಈಗಾಗಲೇ ಬಳಕೆ ಮಾಡುತ್ತಿರುವವರು, ಅಪ್‍ಡೆಟ್ ಅಥವಾ ರಿಇನ್ಸಟಾಲ್ ಮಾಡಿಕೊಂಡರೆ ಹೊಸ ಫ್ಯೂಚರ್‍ಗಳು ದೊರೆಯುತ್ತವೆ ಎಂದು ತಿಳಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಿಧಿಸಲಾಗಿರುವ ದಂಡದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ರಿಯಾಯಿತಿ ಸಹಿತ ದಂಡ […]