ಸಿಎಂ ಕಚೇರಿಗೆ ಹೋಗಿದ್ದ ಕಡತ ನಾಪತ್ತೆ..?

ಬೆಂಗಳೂರು,ನ.25-ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ ಕಡತ ಒಂದು ವರ್ಷವಾದರೂ ತಮ್ಮ ಕೈಸೇರಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಅಕಾರಿಯೊಬ್ಬರು ಪತ್ರ ಬರೆದಿರುವುದು ಭಾರೀ ಕುತೂಹಲ ಕೆರಳಿಸಿದೆ. ಕಳೆದ 7.12.2021ರಂದು ಬಿಬಿಎಂಪಿ ಜಾಹೀರಾತು ನಿಯಮ 2019ರ ಕುರಿತಂತೆ ಕಳುಹಿಸಿದ್ದ ಫೈಲ್ ಇನ್ನೂ ಬಂದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಿಎಂ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಬಿಬಿಎಂಪಿಗೆ ಸಂಬಂಸಿದ ಈ ಮಹತ್ವದ ಫೈಲ್ ಲೆಕ್ಕಪತ್ರ ಸಮಿತಿಗೆ ಸಲ್ಲಿಸಲಾಗಿದೆಯೋ ಅಥವಾ ವಾಪಸಾಗಿದೆಯೋ ಎಂಬುದರ ಬಗ್ಗೆ ಅಕಾರಿಗಳೇ ಕಂಗಾಲಾಗಿದ್ದು, […]