ಅಮೆರಿಕ ವೀಸಾ ವಿಳಂಬಕ್ಕೆ ಶೀಘ್ರ ಪರಿಹಾರ – ಶ್ವೇತಭವನ

ವಾಷಿಂಗ್ಟನ್, ಡಿ 9- ಭಾರತದಲ್ಲಿ ವೀಸಾ ನೀಡುವಲ್ಲಿ ದೀರ್ಘ ವಿಳಂಬವಾಗುತ್ತರುವ ಬಗ್ಗೆ ನಮಗೆ ತಿಳಿದಿದೆ ಇದನ್ನು ಶೀಘ್ರದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್‍ಪಿಯರ್ ತಿಳಿಸಿದರು. ಭಾರತದಲ್ಲಿನ ಮಿಷನ್ ಅಮೆರಿಕ ಪ್ರಕ್ರಿಯೆಯಲ್ಲಿ ವೀಸಾಗೆ ಸಂದರ್ಶನ ಅವಧಿಯ ಪ್ರಸ್ತುತ 1,000 ದಿನಗಳಿಗಿಂತ ಹೆಚ್ಚು ಕಾಲ ಹಿಡಿಯುತ್ತಿದೆ ಅವರು ಹೇಳಿದರು. ಸಾಂಕ್ರಾಮಿಕ ಕೊರೊನಾದಿಂದಾಗಿ ಪ್ರಕ್ರಿಯೆ ನಿಂತಿತ್ತು ನಮ್ಮ ಸಿಬ್ಬಂದಿ ಸವಾಲುಗಳಿಂದ ಚೇತರಿಸಿಕೊಳ್ಳುವಲ್ಲಿ ಸಲ್ಪ ಸಮಯ ಕಳೆದಿದೆ ಆದರೂ ನಾವು ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ ಪ್ರಸ್ತುತ ವೀಸಾ […]