ಮಹಿಳಾ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಕುಡುಕ

ನವದೆಹಲಿ,ಜ.4- ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ನವೆಂಬರ್‍ನಲ್ಲಿ 26 ರಂದು ನ್ಯೂಯಾರ್ಕ್‍ನಿಂದ ದೆಹಲಿಗೆ ಬರುತ್ತಿದ್ದ ವಿಮಾನದ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಪ್ರಯಾಣಿಸುತ್ತಿದ್ದ 70 ವರ್ಷದ ಪ್ರಯಾಣಿಕರೊಬ್ಬರು ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ಈ ಕುರಿತಂತೆ ಮಹಿಳೆ ನೀಡಿದ ದೂರಿನ ಮೇರೆಗೆ ಅಸಭ್ಯ ಧೋರಣೆ ತೋರಿದ ಪ್ರಯಾಣಿಕನನ್ನು ನೋ ಫ್ಲೈ ಲಿಸ್ಟ್‍ಗೆ ಸೇರಿಸಬಹುದಾಗಿದೆ ಎಂದು ಏರ್‍ಲೈನ್ಸ್ ತಿಳಿಸಿದೆ. ವಿಮಾನದಲ್ಲಿ […]

ಅಮೆರಿಕ – ಭಾರತ ನಕಲಿ ನೋಟು ಜಾಲ ಪತ್ತೆ

ಬೆಂಗಳೂರು, ಡಿ.14- ಹಣ ದ್ವಿಗುಣಗೊಳಿಸುವುದು, ವಿದೇಶಿ ಹೂಡಿಕೆ ಸೇರಿದಂತೆ ಹಲವು ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಕತರ್‍ನಾಕ್ ಜಾಲವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಈ ಮೂಲಕ ಹಣಕಾಸು ವ್ಯವಸ್ಥೆ ಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದ ವಿದೇಶಿ ಸಂಪರ್ಕಿತ ದಂಧೆಯೊಂದು ಬಯಲಿಗೆ ಬಂದಿದೆ. ಆರೋಪಿಗಳ ಮನೆಯಲ್ಲಿ ಒಂದು ಕೋಟಿ 10 ಲಕ್ಷ ರೂಪಾಯಿ ಮೌಲ್ಯದ ಭಾರತ ಮತ್ತು ಅಮೆರಿಕದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಹೆಣ್ಣೂರು ಪೊಲೀಸ್ ಠಾಣೆ […]

ಭಾರತ-ಅಮೇರಿಕ ನಡುವೆ ಅತ್ಯುತ್ತಮ ಸಂಬಂಧವಿದೆ : ಶ್ವೇತಭವನದ ಉನ್ನತಾಧಿಕಾರಿ

ನವದೆಹಲಿ,ನ.21- ಅಮೆರಿಕಾ ಮತ್ತು ಭಾರತ ನಡುವೆ ಅತ್ಯುತ್ತಮ ಸಂಬಂಧವಿದೆ. ಇದು ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದು ಶ್ವೇತಭವನದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. 2022ರಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ಬಾಂಧವ್ಯ ಉತ್ತಮ ಮಟ್ಟದಲ್ಲಿತ್ತು. ಇದು 2023ರಲ್ಲೂ ಮುಂದುವರೆಯಲಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಹಲೆಗಾರ ಜಾನ್ ಫೈನರ್ ಅಭಿಪ್ರಾಯಪಟ್ಟಿದ್ದಾರೆ. ಇಂಡೋನೆಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಜಿ-20 ಶೃಂಗಸಭೆಯಲ್ಲಿ ಎಲ್ಲಾ ರಾಷ್ಟ್ರಗಳ ನಡುವೆ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು […]