ಶಾಶ್ವತವಾಗಿ ಮುಚ್ಚಿದ ಅಮೇರಿಕಾದ ಸಿಲಿಕಾನ್ ವ್ಯಾಲಿ ಬ್ಯಾಂಕ್

ವಾಷಿಂಗ್ಟನ್,ಮಾ.13 – ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆಯನ್ನು ಹೆಚ್ಚು ಮಾಡುವ ಮೂಲಕ ಅಮೇರಿಕಾದ ಆರ್ಥಿಕ ಶಕ್ತಿಯನ್ನು ಬಲಪಡಿಸಲು ಮುಂದಾಗಿರುವ ಬಿಡೆನ್ ಸರ್ಕಾರವು, ಸ್ಥಗಿತಗೊಂಡಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್‍ನ ಠೇವಣಿದಾರರು ಇಂದಿನಿಂದ ತಮ್ಮ ಹಣವನ್ನು ಪಡೆಯಬಹುದು ಎಂದು ಘೋಷಿಸಿದೆ. ಫೆಡೆರಲ್ ಡೆಪಾಸೀಟ್ ಇನ್ಸೂರೆನ್ಸ್ ಕಾಪೆರ್ರೇಷನ್ ಮತ್ತು ಫೆಡೆರಲ್ ರಿಸರ್ವ್ ಶಿಫಾರಸ್ಸಿನ ಮೇರೆಗೆ ಅಧ್ಯಕ್ಷರೊಂದಿಗೆ ಚರ್ಚಿಸಿದ ವಿತ್ತ ಕಾರ್ಯದರ್ಶಿ ಜಾನೆಟ್ ಯೆಲೆನ್, ಠೇವಣಿದಾರರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕ್ಯಾಲೀಪೋರ್ನಿಯಾದ ಸಿಲಿಕಾನ್ ವ್ಯಾಲಿ ಬ್ಯಾಂಕ್‍ನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಎಫ್‍ಡಿಐಸಿಗೆ ಅನುಮತಿ ನೀಡಿದ್ದಾರೆ. […]