ಉಕ್ರೇನ್‍ನಲ್ಲಿ ರಷ್ಯಾ ಆಕ್ರಮಣ ಭೀತಿ, ದೇಶ ತೊರೆಯಲು ರಾಯಭಾರಿ, ಸಿಬ್ಬಂದಿಗೆ ಅಮೆರಿಕಾ ಸೂಚನೆ

ವಾಷಿಂಗ್ಟನ್, ಜ. 24-ರಷ್ಯಾದ ಆಕ್ರಮಣದ ಭೀತಿಯ ನಡುವೆ ಉಕ್ರೇನ್‍ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿರುವ ಎಲ್ಲಾ ಸಿಬ್ಬಂದಿ ಕುಟುಂಬದವರು ದೇಶ ತೊರೆಯುವಂತೆ ವಿದೇಶಾಂಗ ಇಲಾಖೆ ಆದೇಶಿಸಿದೆ. ಕೈವ್‍ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಸಿಬ್ಬಂದಿಗಳು ಮತ್ತವರ ಅವಲಂಬಿತರು ಉಕ್ರೇನ್ ದೇಶವನ್ನು ತೊರೆಯಬೇಕು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಉಕ್ರೇನ್ ಗಡಿಯಲ್ಲಿ ರಷ್ಯಾದ ಮಿಲಿಟರಿ ಜಮಾವಣೆಯಿಂದ ಉದ್ವಿಗ್ನತೆಯ ಹೆಚ್ಚುತ್ತಿದೆ ಇದರ ಮಧ್ಯೆ ಜಿನೀವಾದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನಡುವೆ ಮಾತುಕತೆ ಸರಾಗವಾಗಿರಲಿಲ್ಲ. […]