ಶಿವಮೊಗ್ಗ ಜಿಲ್ಲೆಯ ಶಾಲೆಯೊಂದರಲ್ಲಿ ಸೀರೆ ಶೌಚಾಲಯ..!

ಶಿವಮೊಗ್ಗ,ಡಿ.14- ಇಡಿ ವಿಶ್ವ ಆಧುನಿಕತೆಯಲ್ಲಿ ನಾಗಾಲೋಟದಿಂದ ಸಾಗುತ್ತಿದ್ದರೂ ಹಲವಾರು ಜೀವಂತ ಸಮಸ್ಯೆಗಳಿಗೆ ಇನ್ನು ಮುಕ್ತಿ ಸಿಕ್ಕಿಲ್ಲ ಎನ್ನುವುದಕ್ಕೆ ಶಿವಮೊಗ್ಗ ಜಿಲ್ಲೇಯ ಈ ಕುಗ್ರಾಮವೇ ಸಾಕ್ಷಿ. ಸಾಗರದಿಂದ 60 ಕಿ.ಮೀ ದೂರದಲ್ಲಿರುವ ಬರುವೆ ಗ್ರಾಮದ ಸಮೀಪದ ಎಲಿಗೆ ಎಂಬ ಕುಗ್ರಾಮದಲ್ಲಿರುವ ಶಾಲಾ ಮಕ್ಕಳಿಗೆ ಸೀರೆ ಅಡ್ಡಲಾಗಿ ಕಟ್ಟಿರುವ ಪ್ರದೇಶವೇ ಶೌಚಾಲಯವಾಗಿ ಪರಿವರ್ತನೆಯಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಳು ವಿದ್ಯಾರ್ಥಿನಿಯರು ಹಾಗೂ ಆರು ವಿದ್ಯಾರ್ಥಿಗಳು ಬಹಿರ್ದೇಷೆಗೆ ಹೋಗಬೇಕಾದರೆ ಸೀರೆ ಅಡ್ಡ ಕಟ್ಟಲಾದ ಪ್ರದೇಶದಲ್ಲೆ ತಮ್ಮ ಬಾಧೆ ತೀರಿಸಿಕೊಳ್ಳುವಂತಹ ಸನ್ನಿವೇಶ […]