ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು : ಸಚಿವೆ ಉಷಾ ಠಾಕೂರ್

ಮಾಹು,ನ.15- ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಮತ್ತು ಅಂತಹ ದುಷ್ಕರ್ಮಿಗಳ ಅಂತ್ಯಕ್ರಿಯೆಯಲ್ಲಿ ಸಮುದಾಯ ಭಾಗವಹಿಸಬಾರದು ಎಂದು ಮಧ್ಯಪ್ರದೇಶದ ಸಂಸ್ಕøತಿ ಸಚಿವೆ ಉಷಾ ಠಾಕೂರ್ ಒತ್ತಾಯಿಸಿದ್ದಾರೆ. ಇಂದೋರ್ ಜಿಲ್ಲೆಯ ಕೊಡಿರಿಯಾ ಗ್ರಾಮದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಅತ್ಯಾಚಾರಿಗಳನ್ನು ನೇಣುಗೇರಿಸುವ ಜೊತೆಗೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಬಾರದು. ರಣಹದ್ದುಗಳು ಅವರ ದೇಹಗಳನ್ನು ಕುಕ್ಕಿ ಕುಕ್ಕಿ ತಿನ್ನಬೇಕು. ಅದನ್ನು ಎಲ್ಲರೂ ನೋಡುವಂತಾಗಬೇಕು. ಆ ಮೂಲಕ ಅತ್ಯಾಚಾರಕ್ಕೆ ಯಾರೂ ಧೈರ್ಯ ಮಾಡಬಾರದು ಎಂದು ಹೇಳಿದ್ದಾರೆ. ರಿಷಿ ಸುನಕ್‍ ಮತ್ತು ಮೋದಿ […]