ಉತ್ತರಪ್ರದೇಶದಲ್ಲಿ 61 ಕ್ಷೇತ್ರಗಳಲ್ಲಿ ಇಂದು 5ನೇ ಹಂತದ ಮತದಾನ

ಲಖ್ನೋ,ಫೆ.27- ಉತ್ತರಪ್ರದೇಶ ಲೋಕಸಭೆಗೆ 5ನೇ ಹಂತದ ಮತದಾನ ಇಂದು ನಡೆಯಿತು. 12 ಜಿಲ್ಲೆಗಳಲ್ಲಿ ಪ್ರಯಾಗ್‍ರಾಜ್, ರಾಯ್‍ಬರೇಲಿ, ಅಮೇಥಿ, ಅಯೋಧ್ಯ ಸೇರಿದಂತೆ ಪ್ರಮುಖ 61 ಕ್ಷೇತ್ರಗಳಲ್ಲಿ 692 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಘಟಾನುಘಟಿ ನಾಯಕರು ಸ್ಪರ್ಧಿಸುತ್ತಿದ್ದು , 2.24 ಕೋಟಿ ಮತದಾರರು ಮತ ಚಲಾವಣೆ ಮಾಡುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಆರಂಭಗೊಂಡ ಮತದಾನ ನೀರಸವಾಗಿತ್ತು. ಶಾಂತಿಯುತ ಹಾಗೂ ನಿರ್ಭೀತ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಂಡಿರುವುದಾಗಿ ಮುಖ ಚುನಾವಣಾಕಾರಿ ಬಿ.ಡಿ.ರಾಮ್ ತಿವಾರಿ ಲಖ್ನೋದಲ್ಲಿ ತಿಳಿಸಿದ್ದಾರೆ. ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್‍ಮೌರ್ಯ, […]