ಮಧ್ಯಪ್ರದೇಶದ ಬಳಿಕ ಈಗ ಉತ್ತರಖಂಡ್‌ನಲ್ಲೂ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ

ಡೆಹರಾಡೂನ್,ನ.5- ಮಧ್ಯಪ್ರದೇಶ ರಾಜ್ಯದ ಬಳಿಕ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಕಲಿಸಲು ಉತ್ತರಖಂಡ್ ಸರ್ಕಾರ ಮುಂದಾಗಿದ್ದು, ಪಠ್ಯಕ್ರಮ ರಚನೆಗೆ ತಜ್ಞರ ಸಮಿತಿ ರಚಿಸಿದೆ. ಉತ್ತರಖಂಡನ ವೈದ್ಯಕೀಯ ಶಿಕ್ಷಣ ಸಚಿವ ಧನ್ಸಿಂಗ್ ರಾವತ್ ಅವರು ಹೇಳಿಕೆ ನೀಡಿದ್ದು, ಸಮಿತಿ ವರದಿ ಸಲ್ಲಿಕೆ ಬಳಿಕ ಮುಂದಿನ ವರ್ಷದಿಂದ ವೈದ್ಯಕೀಯ ಶಿಕ್ಷಣದ ಪಠ್ಯಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಬೋಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪಠ್ಯಕ್ರಮ ರಚನೆಗಾಗಿ ಪೌರಿ ಜಿಲ್ಲೆಯ ಶ್ರೀನಗರದ ಸರ್ಕಾರಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ […]