ವಾಜಪೇಯಿ ಕಪ್ ವಾಲಿಬಾಲ್ ಪಂದ್ಯ: ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ಬೆಂಗಳೂರು,ಜ.1- ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮಹಾಲಕ್ಷ್ಮೀಲೇಔಟ್ನ ಶಂಕರಮಠದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ವಾಜಪೇಯಿ ಕಪ್ ಹೊನಲು ಬೆಳಕಿನ ಪುರುಷರ ಪಂದ್ಯಾವಳಿಯಲ್ಲಿ ಕೇರಳದ ಎಂ.ಜಿ. ವಿಶ್ವವಿದ್ಯಾನಿಲಯ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಕರ್ನಾಟಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನಿನ್ನೆ ರಾತ್ರಿ ನಡೆದ ರೋಚಕ ವಾಲಿಬಾಲ್ ಪಂದ್ಯದಲ್ಲಿ ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯ ಹಾಗೂ ಉಜಿರಿಯ ಎಸ್ಡಿಎಂ ವಿವಿ ನಡುವೆ ನಡೆದ ಫೈನಲ್ ಪಂದ್ಯ ನಡೆಯಿತು. ಕೊನೆ ಕ್ಷಣದವರೆಗೂ ನಡೆದ ರೋಚಕ ಹಣಾಹಣಿಯಲ್ಲಿ 24-26, […]