ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ

ಬೆಂಗಳೂರು,ಫೆ.4- ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ವಾಣಿ ಜಯರಾಂ(78) ಇಂದು ಚೆನ್ನೈನ ನುಂಗಂಬಾಕ್ಕಂನಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗಷ್ಟೇ ಭಾರತ ಸರ್ಕಾರ ವಾಣಿ ಜಯರಾಂ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ. ಶಾಸ್ತ್ರೀಯ ಸಂಗೀತಗಾರರ ಕುಟುಂಬದಿಂದ ಬಂದ ವಾಣಿ ಜೈರಾಂ ದುರೈಸಾಮಿ ಅಯ್ಯಂಗಾರ್ ಮತ್ತು ಪದ್ಮಾವತಿ ದಂಪತಿಗೆ ಜನಿಸಿದರು. 2021ರಲ್ಲಿ ಹಿನ್ನಲೆ ಗಾಯಕಿಯಾಗಿ ಜೈರಾಮ್ 50 ವರ್ಷಗಳನ್ನು ಪೂರೈಸಿದ್ದಾರೆ. 1971ರಲ್ಲಿ ತೆರೆ ಕಂಡ ಗುಡ್ಡಿ […]