ಬೆಲೆ ಏರಿಕೆ ನಡುವೆಯೂ ಕುಗ್ಗದ ಹಬ್ಬದ ಉತ್ಸಾಹ : ಮಾರುಕಟ್ಟೆಯಲ್ಲಿ ಜನಜಾತ್ರೆ

ಬೆಂಗಳೂರು,ಆ.4- ಹೂವು, ಹಣ್ಣು, ತರಕಾರಿ ಬೆಲೆ ಏರಿಕೆಯಾಗಿದ್ದರೂ ಸಿಲಿಕಾನ್ ಸಿಟಿ ಜನ ಮಾತ್ರ ವರಮಹಾಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಕೊರೊನಾ ಕಾಟದಿಂದ ಕಳೆದ ಎರಡು ವರ್ಷಗಳಿಂದ ಹಬ್ಬ ಆಚರಿಸಲು ಸಾಧ್ಯವಾಗದೆ ಮನೆಯಲ್ಲೇ ಸಾಮಾನ್ಯವಾಗಿ ಹಬ್ಬ ಆಚರಿಸುವಂತಾಗಿತ್ತು. ಇದೀಗ ಕೊರೊನಾ ಕಾಟ ಇಲ್ಲದಿರುವುದರಿಂದ ಈ ಬಾರಿ ಅದ್ದೂರಿಯಾಗಿ ಹಬ್ಬ ಆಚರಿಸಲು ತೀರ್ಮಾನಿಸಿರುವುದರಿಂದ ಹಬ್ಬದ ಹಿಂದಿನ ದಿನವೇ ಮಾರುಕಟ್ಟೆಗಳಿಗೆ ಮುಗಿ ಬಿದ್ದು ಬೆಲೆ ಹೆಚ್ಚಳವಾದರೂ ಹೂವು-ಹಣ್ಣು ಮತ್ತಿತರ ಹಬ್ಬದ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ. ಬೆಳ್ಳಂಬೆಳಿಗ್ಗೆ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಜಮಾಯಿಸಿದ್ದ ಸಾವಿರಾರು […]