ಬೆಂಗಳೂರಿನ ರಾಜಕಾಲುವೆಯಲ್ಲಿ ಕೊಚ್ಚಿಹೋದ ಬಾಲಕ

ಬೆಂಗಳೂರು.17- ಆಟವಾಡುತ್ತಿದ್ದಾಗ ಮೂರು ವರ್ಷದ ಮಗು ರಾಜಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿಹೊಗಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಬೀರ್ ರಾಜಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿರುವ ಮಗು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ವರ್ತೂರು ಬಳಿ ಇರುವ ಶೋಭ ಗ್ರೀನ್ ಆಪಾರ್ಟ್‍ಮೆಂಟ್‍ನ ಬಳಿಯ ಶೆಡ್‍ವೊಂದರಲ್ಲಿ ಆಹಾರ ವಿತರಿಸುವ ಝುಮೋಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್‍ರವರ ಪುತ್ರ ಕಬೀರ್ ಹಾಗೂ ಇನ್ನೊಬ್ಬ ಬಾಲಕ ಆಟವಾಡಲು ರಾಜಕಾಲುವೆ ಬಳಿ ಹೋಗಿದ್ದರು. ನಿನ್ನೆ ಸಂಜೆ ಜೋರು ಮಳೆ ಬಂದ […]