ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ವೀರಚಾರಿ ಆತ್ಮಹತ್ಯೆ

ದಾವಣಗೆರೆ, ಸೆ.20- ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಚಾರಿ (68) ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಂದು ಮುಂಜಾನೆ ಹರಿಹರ ತಾಲೂಕಿನ ಮಿಡ್ಲಕಟ್ಟೆ ಗ್ರಾಮದಲ್ಲಿರುವ ಅವರ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜನರಿಗೆ ಅಕ್ಕಿ ವಿತರಿಸದೆ ನ್ಯಾಯಬೆಲೆ ಅಂಗಡಿಯವರು ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿ ಕಳೆದ ಹಲವು ದಿನಗಳಿಂದ ವೀರಾಚಾರಿ ಹೋರಾಟ ನಡೆಸಿದ್ದರು. ಇದು ನ್ಯಾಯಾಲಯದ ಮೆಟ್ಟಿಲು ಕೂಡ ಏರಿತ್ತು. ಇತ್ತೀಚೆಗೆ ಅವರು ನನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಜ್ಞೆ […]