ಏ.10ರೊಳಗೆ ಮೀಸಲಾತಿ ನೀಡದಿದ್ದರೆ ಬಿಜೆಪಿಗೆ ಮತ ಹಾಕದಂತೆ ಅಭಿಯಾನ

ಬೆಂಗಳೂರು,ಮಾ.15- ಪಂಚಮಸಾಲಿ ಸಮುದಾಯಕ್ಕೆ ಏಪ್ರಿಲ್ 10ರೊಳಗೆ ಮೀಸ ಲಾತಿ ನೀಡುವ ಸಂಬಂಧ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟ ಮಾಡಿದಿದ್ದರೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ರಾಜ್ಯಾದ್ಯಂತ ಅಭಿಯಾನ ನಡೆಸುತ್ತೇವೆ ಎಂದು ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ.15ರ ಬುಧವಾರದ ವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗಿತ್ತು. ಸರ್ಕಾರಕ್ಕೆ ಕೊಟ್ಟ ಕಾಲಾವಕಾಶ ಮುಗಿದಿದ್ದು, ಹಾಗೂ 61ನೇ ದಿನಕ್ಕೆ ಸತ್ಯಾಗ್ರಹವು ಪೂರ್ಣಗೊಂಡಿದೆ. ಏಪ್ರಿಲ್ 10ರೊಳಗೆ ಮೀಸಲಾತಿ ನೀಡುವ ಸಂಬಂಧ […]

ಜನಸಂಖ್ಯೆಗನುಗುಣವಾಗಿ ರಾಜಕೀಯ ಪ್ರಾತಿನಿಧ್ಯಕ್ಕೆ ಲಿಂಗಾಯಿತ ವೀರಶೈವರ ಆಗ್ರಹ

ಬೆಂಗಳೂರು,ಮಾ.15- ಜನಸಂಖ್ಯೆಗೆ ಅನುಗುಣವಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯಿತ ವೀರಶೈವ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು, ಇಲ್ಲವಾದರೆ ಸಮುದಾಯ ಬೇರೆಯ ರೀತಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ರಾಜಾಜಿನಗರದ ಸಿದ್ದಗಂಗಾ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ಬಳಗ ಮತ್ತು ವಿಶ್ವ ವೀರಶೈವ ಯುವ ವೇದಿಕೆ ವತಿಯಿಂದ ನಡೆದ ಸಭೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲಾಯಿತು. ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಜನಸಂಖ್ಯೆ 1ಕೋಟಿ 50ಲಕ್ಷದಷ್ಟಿದೆ. ಹಳೆ ಮೈಸೂರು […]

ಸಿದ್ದು ಪಶ್ಚಾತ್ತಾಪದ ಮಾತು ಒಡೆದ ಹಾಲಿನಂತೆ : ಸಚಿವ ಅಶೋಕ್ ವ್ಯಂಗ್ಯ

ಕಲಬುರಗಿ, ಆ.21- ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಏನೆಲ್ಲ ಮಾಡಬೇಕು ಅದನ್ನು ಮಾಡಿಬಿಟ್ಟಿದ್ದಾರೆ. ಕಡ್ಡಿ ಗೀರಿ ಅವರು ಹಚ್ಚಿರೋ ಬೆಂಕಿ ಹೊತ್ತಿ ಉರಿದು ಬೂದಿಯಾಗಿದೆ. ಬೂದಿಯಿಂದ ಮತ್ತೆ ಕಟ್ಟಿಗೆ ತಯಾರು ಮಾಡಲಾಗುತ್ತಾ? ಹೀಗಾಗಿ ಈಗ ಪಶ್ಚಾತ್ತಾಪದ ಮಾತು ಪ್ರಯೋಜನವಿಲ್ಲವೆಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಆಡಕಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಪಶ್ಚಾತ್ತಾಪದ ಮಾತುಗಳನ್ನಾಡಿದರೂ ಯಾವುದೇ ಲಿಂಗಾಯತರು ಇವರ ಮಾತನ್ನು ನಂಬುವುದಿಲ್ಲ. ನೂರಾರು ವರ್ಷಗಳಿಂದ ಧರ್ಮದ ವಿಚಾರದಲ್ಲಿ ಸಾಮರಸ್ಯ ಕಾಪಾಡಿಕೊಂಡು ಬಂದಂತಹ ನಾಡು […]