ಪೊಲೀಸರ ಅತಿರೇಕದ ವರ್ತನೆ ಸಹಿಸಲ್ಲ : ಸಿಎಂ ಎಚ್ಚರಿಕೆ
ಬೆಂಗಳೂರು,ಜ.30- ವಾಹನಗಳ ಟೋಯಿಂಗ್ ಮಾಡುವ ವ್ಯವಸ್ಥೆ ಕುರಿತಂತೆ ನಾಳೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧ-ವಿಕಾಸಸೌಧ ನಡುವೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಮಹಾತ್ಮ ಗಾಂೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿದ ನಂತರ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು. ಟೋಯಿಂಗ್ ಮಾಡುವಾಗ ಅತಿರೇಕದ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರಕ್ಷಣೆ ಮಾಡಬೇಕಾದವರೇ ಆ ರೀತಿ ವರ್ತಿಸುವುದು ಸರಿಯಲ್ಲ. […]