ಕಾಂಗ್ರೆಸ್ ಹಿರಿಯ ನಾಯಕಿ-ಲೇಖಕಿ ಜಯಂತಿ ಪಟ್ನಾಯಕ್ ನಿಧನ

ಭುವನೇಶ್ವರ್,ಸೆ.29-ಕಾಂಗ್ರೆಸ್ ಹಿರಿಯ ನಾಯಕಿ, ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷೆ ಹಾಗೂ ಮಾಜಿ ಸಂಸದೆ, ಖ್ಯಾತ ಲೇಖಕಿ ಜಯಂತಿ(90) ಪಟ್ನಾಯಕ್ ನಿಧನರಾಗಿದ್ದಾರೆ. ಒಡಿಶಾದ ಮಾಜಿ ಮುಖ್ಯಮಂತ್ರಿ, ಅಸ್ಸಾಂನ ಮಾಜಿ ಗವರ್ನರ್ ದಿವಂಗತ ಜೆ.ಬಿ.ಪಟ್ನಾಯಕ್ ಅವರ ಪತ್ನಿ ಹಾಗೂ ನಾಲ್ಕು ಬಾರಿ ಸಂಸದರಾಗಿದ್ದ ಜಯಂತಿ ಅವರು ಮೃತಪಟ್ಟಿದ್ದಾರೆ ಎಂದು ಪುತ್ರ ಪ್ರೀತಿವ್ ಬಲ್ಲಾವ್ ಪಟ್ನಾಯಕ್ ತಿಳಿಸಿದ್ದಾರೆ. ಗಂಜಾಮ್ ಜಿಲ್ಲೆಯ ಅಸ್ಕಾದಲ್ಲಿ 1932ರ ಏಪ್ರಿಲ್ 7ರಂದು ಜನಿಸಿದ ಜಯಂತಿ, ಕಟಕ್‍ನ ಶೈಲಬಾಲಾ ಮಹಿಳಾ ಸ್ವಾಯತ್ತ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಹಾಗೂ […]