ನಾನು ಹಿಂದೂ ರಾಮಯ್ಯ ಕೃತಿ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥ: ಡಾ.ವೋಡೆ ಪಿ.ಕೃಷ್ಣ

ಬೆಂಗಳೂರು, ಅ.27- ನಾನು ಹಿಂದೂ ರಾಮಯ್ಯ ಕೃತಿಯು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥವಾಗಲಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೋಡೆ ಪಿ.ಕೃಷ್ಣ ಅಭಿಪ್ರಾಯಪಟ್ಟರು. ಅಭಿಮಾನಿ ಪ್ರಕಾಶನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನದಲ್ಲಿಂದು ಹಮ್ಮಿಕೊಂಡಿದ್ದ ನಾನು ಹಿಂದೂ ರಾಮಯ್ಯ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ಕನ್ನಡದ ಸೊಗಸಾದ ಕೃತಿಯಾಗಿದೆ. ಧಣಿವರಿಯದ ಕಾಯಕ ಯೋಗಿ ಪಿ.ರಾಮಯ್ಯ ಪತ್ರಿಕೋದ್ಯಮದ ದೃವತಾರೆಯಾಗಿದ್ದಾರೆ. ಇದುವರೆಗೂ ಅವರನ್ನು ಕಡೆಗಣಿಸಿ ಯಾರೂ ಮಾತನಾಡಿದ್ದನ್ನು ನೋಡಿಲ್ಲ. […]