ಕುಕ್ಕರ್ ಕಿರಾತಕನಿಗೆ ನಾಳೆ ಶಸ್ತ್ರ ಚಿಕಿತ್ಸೆ

ಬೆಂಗಳೂರು,ಡಿ.19-ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರೀಕ್‍ಗೆ ನಾಳೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ. ಹಿರಿಯ ವೈದ್ಯರಾದ ಕೆ.ಟಿ.ರಮೇಶ್ ನೇತೃತ್ವದ ವೈದ್ಯರ ತಂಡ ಶಾರೀಕ್‍ಗೆ ಪ್ಲಾಸ್ಟಿಕ್ ಸರ್ಜರಿ ನಡೆಸಲಿದೆ. ಕುಕ್ಕರ್ ಬಾಂಬ್ ಸ್ಪೋಟದ ವೇಳೆ ಶಾರೀಕ್‍ನ ಎದೆ ಮತ್ತು ಮುಖ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆರಂಭದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆತ ಬಹುತೇಕ ಗುಣಮುಖನಾಗಿದ್ದಾನೆ. ಮುಖದ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿಗಾಗಿ ಆರೋಪಿಯನ್ನು ಬೆಂಗಳೂರಿಗೆ ಕರೆತರಲಾಗಿದೆ. ಪ್ರಾಥಮಿಕ ಪರೀಕ್ಷೆಗಳು ನಡೆದ ಬಳಿಕ ಶಸ್ತ್ರ […]