ವಿದ್ಯಾಸಾಗರ್ ಶಾಲೆ ಬಳಿ ನಡೆದ ಗಲಾಟೆ ಹಿಂದೆ ಕೆಲ ಸಂಘಟನೆಗಳ ಕೈವಾಡ..!

ಬೆಂಗಳೂರು, ಫೆ.14- ನಗರದ ಚಂದ್ರಲೇಔಟ್‍ನ ವಿದ್ಯಾಸಾಗರ್ ಶಾಲೆ ಆವರಣದಲ್ಲಿ ಶನಿವಾರ ನಡೆದ ಗಲಾಟೆಯಲ್ಲಿ ಕೆಲ ಸಂಘಟನೆಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಂದು ಆರಂಭದಲ್ಲಿ ಪೋಷಕರು ಶಾಂತಿಯುತವಾಗಿ ಶಿಕ್ಷಕರಿಂದ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅಲ್ಲಿಗೆ ಕೆಲವು ವ್ಯಕ್ತಿಗಳು ಬಂದ ನಂತರ ಗಲಾಟೆ ತೀವ್ರಗೊಂಡಿತ್ತು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರಾದ ಡಾ.ರಾಜು ಅವರು ಸಹ ಇದಕ್ಕೆ ಪುಷ್ಟಿ ನೀಡುವಂತೆ ಹೇಳಿಕೆ ನೀಡಿದ್ದು, ಅಂದು ಗಲಾಟೆ ವೇಳೆ ಪೋಷಕರಿಗಿಂತ ಹೊರಗಿನವರೇ ಹೆಚ್ಚಾಗಿದ್ದರು ಎಂದು […]