ತೆರಿಗೆ, ಬೆಲೆ ಏರಿಕೆ ಹೆಸರಲ್ಲಿ ಹಣ ಲೂಟಿ : ಸಿದ್ದರಾಮಯ್ಯ

ಬೆಂಗಳೂರು,ಮಾ.6- ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜನರಿಂದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿ ಇತರ ಬೆಲೆ ಏರಿಕೆಯಿಂದ ಲೂಟಿ ಮಾಡಿದ ಹಣದಲ್ಲಿ ಎಷ್ಟು ವಾಪಾಸ್ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಬಹಿರಂಗ ಪತ್ರ ಬರೆದಿರುವ ಅವರು, ಬಿಜೆಪಿಯು ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದೆ. ಯಾತ್ರೆ ನಡೆಸುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಯಾವ ಮುಖವನ್ನು ಹೊತ್ತುಕೊಂಡು ವಿಜಯ ಸಂಕಲ್ಪ ಯಾತ್ರೆ ಹೊರಟಿದೆ ಎಂದು ರಾಜ್ಯದ ಜನರಿಗೆ […]