ರೈಲ್ವೆ, ಬಸ್ ಸಂಚಾರ ಸಂಬಂಧಿಸಿದ ಕೇರಳ ಪ್ರಸ್ತಾವನೆಗಳ ತಿರಸ್ಕಾರ
ಬೆಂಗಳೂರು,ಸೆ.18- ಕೇರಳ ಸರ್ಕಾರ ಮುಂದಿಟ್ಟಿದ್ದ ಮೂರು ಪ್ರಸ್ತಾವನೆಗಳನ್ನು ಕರ್ನಾಟಕ ಸರ್ಕಾರ ಸಾರಾಸಗಟವಾಗಿ ತಿರಸ್ಕರಿಸಿದೆ. ಕೇರಳ ಮುಖ್ಯಮಂತ್ರಿ ವಿಜಯನ್ ಪಿಣರಾಯ್ ಅವರು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ, ನೆನೆಗುದಿಗೆ ಬಿದ್ದಿರುವ ಎರಡು ರೈಲ್ವೆ ಯೋಜನೆ ಸೇರಿದಂತೆ ಮೂರು ಪ್ರಸ್ತಾವನೆಗಳಿಗೆ ಕರ್ನಾಟಕ ಸರ್ಕಾರ ಅನುಮತಿ ಕೊಡಬೇಕೆಂದು ಮನವಿ ಮಾಡಿದರು. ಕೇರಳದ ಬಹುನಿರೀಕ್ಷಿತ ಕನ್ನಿಯೂರು ರೈಲ್ವೆ ಯೋಜನೆಯ 45 ಕಿ.ಮೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಇದೊಂದು ಪರಿಸರ ಸೂಕ್ಷ್ಮ ವಲಯ ಎಂಬ ಕಾರಣಕ್ಕಾಗಿ […]