ಪುಟಿನ್ ನಿಜಕ್ಕೂ ಜಗತ್ತಿನ ಶ್ರೇಷ್ಠ ನಾಯಕನೇ..? ಇಲ್ಲಿದೆ ಮಹತ್ವದ ಮಾಹಿತಿಗಳು

ನವದೆಹಲಿ,ಮಾ.3- ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಗತ್ತಿನ ಶ್ರೇಷ್ಠ ನಾಯಕ ಎಂದು ಬಿಂಬಿಸಲಾಗುತ್ತಿದೆ. ಪುಟಿನ್ ಅವರ ವಿದೇಶಾಂಗ ನೀತಿಗಳು, ಭಾರತದ ಪರವಾದ ನಿಲುವು ಮತ್ತು ಅಮೆರಿಕ ವಿರೋಧಿ ಧೋರಣೆಗಳ ಕುರಿತು ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿವೆ.  ಈ ನಡುವೆ ನ್ಯಾಟೋ ಪಡೆಗಳು ಮತ್ತು ಅಮೆರಿಕಾದ ಸರ್ವಾಕಾರಿ ಧೋರಣೆಗೂ ಟೀಕೆಗಳು ಕೇಳಿ ಬಂದಿದ್ದು, ಬಹುತೇಕ ಮುಸ್ಲಿಂ ರಾಷ್ಟ್ರಗಳು ರಷ್ಯಾ ಪರವಾಗಿ ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ. ಉಕ್ರೇನ್ ಮೇಲಿನ ದಾಳಿಯನ್ನು ಅಮೆರಿಕ ತೀವ್ರವಾಗಿ ವಿರೋಧಿಸಿದೆ. […]