ಪಕ್ಷದಲ್ಲಿ ಬದಲಾವಣೆ ಬಯಸುವುದಾದರೆ ನನ್ನನ್ನು ಬೆಂಬಲಿಸಿ : ಶಶಿ ತರೂರ್
ನವದೆಹಲಿ,ಅ.1-ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಾಧಾನವಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ಹಾಕಿ. ಒಂದು ವೇಳೆ ಬದಲಾವಣೆ ಬಯಸುವುದಾದರೆ ನನ್ನನ್ನು ಬೆಂಬಲಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಸೈದ್ದಾಂತಿಕವಾದ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿದ್ದಾರೆ. ಆಂತರಿಕ ಪ್ರಜಾಪ್ರಭುತ್ವ ಪಕ್ಷದಲ್ಲಿ ದೃಢವಾಗಿದೆ. ಹಾಗಾಗಿ ನಾವು ಚುನಾವಣೆಯಲ್ಲಿ ಸ್ರ್ಪಧಿಸಲು ಸಾಧ್ಯವಾಗಿದೆ. ಚುನಾವಣೆ ಪ್ರಕಟವಾಗುತ್ತಿದ್ದಂತೆ ನಾನು ಲೇಖನ ಬರೆದಿದ್ದೆ. ಚುನಾವಣೆ ಪಕ್ಷಕ್ಕೆ ಉತ್ತಮ ಆಯ್ಕೆ ಎಂದು ಉಲ್ಲೇಖಿಸಿದ್ದು, ಅದಕ್ಕೆ ಸರಿಯಾದ […]