ಮತದಾರರ ಮನವೋಲಿಕೆಗೆ ಉಡುಗೊರೆ ನೀಡುವವರಿಗೆ ಕಾದಿದೆ ಸಂಕಷ್ಟ

ಬೆಂಗಳೂರು,ಮಾ.16- ಚುನಾವಣೆಗೂ ಮುನ್ನಾ ಮತದಾರರ ಮನವೋಲಿಕೆಗೆ ನಾನಾ ರೀತಿಯ ಉಡುಗೊರೆ ನೀಡುವವರ ಮೇಲೆ ತೆರಿಗೆ ಸಂಬಂಸಿದ ಇಲಾಖೆಗಳು ಕಣ್ಣಿದ್ದು, ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ವಿಧಾನಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಮತದಾರರನ್ನು ಸೆಳೆಯಲು ಪಕ್ಷಾತೀತವಾಗಿ ಎಲ್ಲರೂ ಉಡುಗೊರೆಗಳ ಮೊರೆ ಹೋಗಿದ್ದಾರೆ. ಆರ್ಥಿಕವಾಗಿ ಪ್ರಬಲವಾಗಿರುವವರು ಟಿವಿ, ಚಿನ್ನಾಭರಣಗಳನ್ನು ನೀಡಿದರೆ, ಸಾಧಾರಣವಾಗಿರುವವರು ಸೀರೆ, ಕುಕ್ಕರ್ ಸೇರಿದಂತೆ ಇತರ ವಸ್ತುಗಳನ್ನು ನೀಡುತ್ತಿದ್ದಾರೆ. ಈ ಎಲ್ಲಾ ಉಡುಗೊರೆಗಳನ್ನು ನೀಡಲು ನಡೆದಿರುವ ಖರೀದಿ ವ್ಯವಹಾರದ ಮೇಲೆ ವಾಣಿಜ್ಯ ತೆರಿಗೆ […]