ಪಂಚರಾಜ್ಯಗಳ ಚುನಾವಣೆ : ನಾಳೆ ಯುಪಿಯಲ್ಲಿ ಮೊದಲ ಹಂತದ ಮತದಾನ

ನವದೆಹಲಿ, ಫೆ.9- ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ. ಶಾಮ್ಲಿ, ಮುಝಾಫರ್‍ನಗರ್, ಬಗತ್, ಮೇರುತ್, ಘಾಜಿಯಾಬಾದ್, ಹಪುರ್, ಗೌತಮ್‍ಬುದ್ಧನಗರ್, ಬುಲಂಶಹರ್, ಆಲಿಘರ್, ಮಥುರಾ, ಆಗ್ರಾ ಸೇರಿ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದೆ. 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಎರಡನೆ ಹಂತದ ಚುನಾವಣೆಗೆ ಫೆಬ್ರವರಿ 14ರಂದು ದಿನ ನಿಗದಿಯಾಗಿದೆ. ಅಂದು ಪಂಚರಾಜ್ಯಗಳ […]