ಮೈಸೂರು ಅರಮನೆ ಕೋಟೆ ಗೋಡೆ ಕುಸಿತ

ಮೈಸೂರು,ಅ.18- ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಐತಿಹಾಸಿಕ ಮೈಸೂರು ಅರಮನೆ ಸುತ್ತ ನಿರ್ಮಿಸಲಾಗಿದ್ದ ಕೋಟೆಯ ಗೋಡೆ ಕುಸಿದಿದೆ. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಇರುವ ಕೋಟೆಯ ಗೋಡೆ ಕುಸಿದಿದೆ. ಅರಮನೆ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ಕೋಟೆಯ ಗೋಡೆ ಇದಾಗಿದೆ. ಕೋಟೆ ಮಾರಮ್ಮ ದೇಗುಲ ಜಯಮಾರ್ತಾಂಡ ದ್ವಾರದ ನಡುವಿನ ಕೋಟೆಯ ಗೋಡೆ ಇದಾಗಿದೆ. ಆಳರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ಅರಮನೆ ಸುತ್ತಲೂ ಈ ಕೋಟೆಯನ್ನು ನಿರ್ಮಿಸಲಾಗಿತ್ತು. […]

ಭಾರೀ ಮಳೆಯಿಂದ ಸೇನಾ ಆವರಣದ ಗೋಡೆ ಕುಸಿದು 9 ಮಂದಿ ಸಾವು

ಲಕ್ನೋ, ಸೆ- ಭಾರೀ ಮಳೆಯಿಂದಾಗಿ ಸೇನಾ ಆವರಣದ ಗಡಿ ಗೋಡೆ ಕುಸಿದು ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಲಕ್ನೋ ಹೊರ ಪ್ರದೇಶದಲ್ಲಿ ನಡೆದಿದೆ. ದಿಲ್ಕುಶಾ ಬಳಿ ಭಾರತೀಯಸೇನಾ ಪಡೆಯ ಪ್ರದೇಶವಿದ್ದು ಸುತ್ತಲು ಭದ್ದತೆಗಾಗಿ ದೊಡ್ಡಗೋಡೆ ಕಟ್ಟಲಾಗಿದೆ. ಇತ್ತೀಚೆಗೆ ಕೆಲವು ಕಾರ್ಮಿಕರು ಗುಡಿಸಲು ಕಟ್ಟಿಕೊಂಡುವಾಸಿಸುತ್ತಿದ್ದರು. ಕಳೆದ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಹೊರಭಾಗದ ಗೋಡೆ ಗುಡಿಸಲ ಮೇಲೆ ಕುಸಿದಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿಯೂಷ್ ಮೊರ್ಡಿಯಾ ತಿಳಿಸಿದ್ದಾರೆ. ಸುಮಾರು 15 ಮಂದಿ ಇಲ್ಲಿ ವಾಸವಿದ್ದರೆನ್ನಲಾಗಿದೆ […]

ಶೆಡ್‍ನ ಗೋಡೆ ಕುಸಿದು ಇಬ್ಬರ ಮಕ್ಕಳ ಸಾವು

ಮಾಗಡಿ,ಆ.7- ರಾತ್ರಿ ಸುರಿದ ಮಳೆಗೆ ಶೆಡ್‍ನ ಗೋಡೆ ಕುಸಿದ ಪರಿಣಾಮ ನೇಪಾಳ ಮೂಲದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಗಂಡು ಮಗು ಫರ್ಬಿನ್(4), ಹೆಣ್ಣು ಮಗು ಇಷಿಕಾ(3) ಮೃತಪಟ್ಟ ಮಕ್ಕಳು. ನೇಪಾಳ ಮೂಲದ ದಂಪತಿ ಇಬ್ಬರು ಮಕ್ಕಳೊಂದಿಗೆ ಕೆಲಸ ಹರಿಸಿಕೊಂಡು ಮಾಗಡಿ ತಾಲ್ಲೂಕಿಗೆ ಬಂದಿದ್ದು, ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಲೂರಿನ ಕೂಡ್ಲೂರು ಕ್ರಾಸ್ ಬಳಿಯ ಮೊಬಿನ್ ಶರೀಫ್ ಎಂಬುವರಿಗೆ ಸೇರಿದ ಶೆಡ್‍ನಲ್ಲಿ ಈ ಕುಟುಂಬ ವಾಸವಾಗಿದೆ. ಕಳೆದ […]

ಗೋಡೆ ಕುಸಿದು ಬಾಲಕ ಸಾವು

ಹಾಸನ, ಆ.5- ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವ ಘಟನೆ ನುಗ್ಗೆಹಳ್ಳಿ ಹೋಬಳಿಯ ಭುವನಹಳ್ಳಿಯಲ್ಲಿ ನಡೆದಿದೆ.ಪ್ರಜ್ವಲ್ (13) ಮೃತಪಟ್ಟ ಬಾಲಕ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮನೆಯ ಗೋಡೆಗೆ ನೀರು ಇಳಿದ ಪರಿಣಾಮ ಮಲಗಿದ್ದ ಪ್ರಜ್ವಲ್ ಮೇಲೆ ರಾತ್ರಿ ಗೋಡೆ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪೋಷಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಗನನ್ನು ರಕ್ಷಿಸಿಕೊಳ್ಳಲು ಪೋಷಕರು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಏಳನೇ ತರಗತಿ ಓದುತ್ತಿದ್ದ ಪ್ರಜ್ವಲ್ ಪ್ರತಿಭಾವಂತ ವಿದ್ಯಾರ್ಥಿ. ಓದಿನಲ್ಲೂ ಮುಂದಿದ್ದ. ಬಾಲಕನ ಸಾವು ಕುಟುಂಬ ಸದಸ್ಯರಿಗೆ ಬರಸಿಡಿಲಿನಂತೆ ಬಂದೆರಗಿದೆ. ಕಣ್ಣೆದುರೇ […]

ಶೆಡ್ ಮೇಲೆ ಗೋಡೌನ್ ಗೋಡೆ ಕುಸಿದು ನಾಲ್ವರ ಸಾವು

ಹೊಸಕೋಟೆ,ಜು.21- ಕೂಲಿ ಕಾರ್ಮಿಕರು ತಂಗಿದ್ದ ಶೆಡ್ ಮೇಲೆ ವೇರ್‍ಹೌಸ್‍ನ ಗೋಡೆ ಕುಸಿದು ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಮೂಲತಃ ಬಿಹಾರದ ಮನೋಜ್‍ಕುಮಾರ್ ಸದಯ್ (35), ರಾಮಕ್‍ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದೆಯ (22) ಹಾಗೂ ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ನಿರ್ಮಾಣ ಹಂತದ ಸೌಪರ್ಣಿಕಾ ಬಹುಮಹಡಿ ಅಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತಂಗಲು ತಾತ್ಕಾಲಿಕ ಶೆಡ್ ನಿರ್ಮಿಸಲಾಗಿತ್ತು. […]