ವರ್ಜೀನಿಯಾದಲ್ಲಿ ಸಾಮೂಹಿಕ ಹತ್ಯಾಕಾಂಡ : ಕನಿಷ್ಠ 10 ಜನರ ಸಾವಿನ ಶಂಕೆ

ವರ್ಜೀನಿಯಾ,ನ.23- ಅಮೆರಿಕದ ವರ್ಜೀನಿಯಾದ ವಾಲ್ಮಾರ್ಟ್ ಮಳಿಗೆಯೊಂದರಲ್ಲಿ ಮತ್ತೊಂದು ಸಾಮೂಹಿಕ ಹತ್ಯಾಕಾಂಡ ನಡೆದಿದ್ದು, ಕನಿಷ್ಠ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. ವರ್ಜೀನಿಯಾದ ಚಸ್ಪಿಕೆಯ ಶಾಮ್ಸರ್ಕಲ್ನಲ್ಲಿರುವ ವಾಲ್ಮಾರ್ಟ್ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಗುಂಡಿನ ದಾಳಿಯಾಗಿರುವ ಸನ್ನಿವೇಶಗಳನ್ನು ಖಚಿತಪಡಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಲವಾರು ಮಂದಿ ಜೀವ ಕಳೆದುಕೊಂಡಿರುವುದು ಖಚಿತವಾಗಿದೆ. ಕನಿಷ್ಠ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಚೆಸ್ಪಿಕೆಯ ಪೊಲೀಸರು ಘಟನೆಯನ್ನು ಖಚಿತಪಡಿಸಿದ್ದು, ದಾಳಿ ನಡೆಸಿದವರು ಕೂಡ ಸಾವನ್ನಪ್ಪಿದ್ದಾರೆ […]