ಸಮಗ್ರ ಅಭಿವೃದ್ದಿಗಾಗಿ ಭಾರತದೊಂದಿಗೆ ಕೆಲಸ ಮಾಡಲು ಸಿದ್ದ ಎಂದ ಚೀನಾ

ಬೀಜಿಂಗ್,ಡಿ.25- ಗಡಿ ಭಾಗದ ಗಲಾಟೆಯ ನಡುವೆಯೂ ಚೀನಾದ ವಿದೇಶಾಂಗ ಸಚಿವ ವಾಂಗ್‍ಯಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸಮಗ್ರ ಅಭಿವೃದ್ದಿಗಾಗಿ ಭಾರತದೊಂದಿಗೆ ಕೆಲಸ ಮಾಡಲು ಚೀನಾ ಸಿದ್ದವಿದೆ ಎಂದು ಹೇಳಿದ್ದಾರೆ. ವರ್ಷದ ಪ್ರಗತಿ ಪರಿಶೀಲನೆಯ ಬಳಿಕ ಬೀಜಿಂಗ್‍ನ ರಾಜತಾಂತ್ರಿಕತೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚೀನಾ ಮತ್ತು ಭಾರತ ಪರಸ್ಪರ ಸಂಹವನವನ್ನು ನಿರ್ವಹಣೆ ಮಾಡುತ್ತಿದೆ. ರಾಜತಾಂತ್ರಿಕತೆ ಮತ್ತು ಸೇನೆಯಿಂದ ಸೇನೆಯ ನಡುವೆ ಚರ್ಚೆಗಳಾಗುತ್ತಿವೆ. ಉಭಯ ರಾಷ್ಟ್ರಗಳು ಗಡಿ ಭಾಗದಲ್ಲಿ ಸುಸ್ಥಿರತೆಯನ್ನು ಎತ್ತಿ ಹಿಡಿಯಲು ಬದ್ದವಾಗಿದೆ ಎಂದಿದ್ದಾರೆ. […]