ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವು

ಹೈದರಾಬಾದ್,ನ.28- ಶಾಲೆಯಲ್ಲಿ ಚಾಕೊಲೇಟ್ ತಿಂದ 9 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ವಾರಂಗಲ್‍ನಲ್ಲಿ ನಡೆದಿದೆ.ಮೃತನನ್ನು ಸಂದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ನಗರದ ಶಾರದಾ ಪ್ರೌಢಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ಸಂದೀಪ್ ಸಿಂಗ್ ಶಾಲೆಗೆ ಪ್ರತಿ ದಿನ ಚಾಕಲೇಟ್ ಒಯ್ಯುವುದು ಅಭ್ಯಾಸವಾಗಿತ್ತು. ಅದೇ ರೀತಿ ಕಳೆದ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಚಾಕಲೇಟ್ ತಿನ್ನುತ್ತಿದ್ದ ಬಾಲಕ ಉಸಿರುಗಟ್ಟಿಕೊಂಡಿದ್ದಾನೆ. ಕೂಡಲೆ ಎಚ್ಚೆತ್ತ ಶಿಕ್ಷಕರು ಗಂಟಲಿಗೆ ಸಿಕ್ಕಿಕೊಂಡಿದ ಚಾಕಲೇಟ್ ತೆಗೆಯಲು ಪ್ರಯತ್ನಿಸಿ ನಂತರ ವಾರಂಗಲ್‍ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ […]