ಪ್ರತಿ ವಾರ್ಡ್‍ನಲ್ಲೂ ಕೊರೊನಾ ಪರೀಕ್ಷಾ ಕೇಂದ್ರ ಆರಂಭ

ಬೆಂಗಳೂರು, ಜ.5- ಕೊರೊನಾ ತಪಾಸಣೆಗೆ ಯಾವುದೇ ಅಡ್ಡಿ-ಆತಂಕ ಎದುರಾಗಬಾರದು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ನಗರದಲ್ಲಿ ವಾರ್ಡ್‍ಮಟ್ಟದ ಟ್ರಯಾಜನ್ ಸೆಂಟರ್‍ಗಳನ್ನು ತೆರೆಯಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಗ ಲಕ್ಷಣ ಕಂಡುಬಂದವರು ಟ್ರಯಾಜನ್ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರು ಸೂಚಿಸಿದವರಿಗೆ ಮಾತ್ರ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು ಎಂದು ಅವರು ವಿವರಣೆ ನೀಡಿದರು. ವಾರ್ಡ್ ಮಟ್ಟದ ಟ್ರಯಾಜನ್ ಸೆಂಟರ್‍ಗಳ ಜತೆಗೆ ಮೊಬೈಲ್ ಟ್ರಯಾಜನ್ ಸೆಂಟರ್‍ಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. […]