ನಾನು ಹುಲಿಯ ಮಗ, ಕೆಣಕಿದರೆ ನಿಮ್ಮನ್ನು ದೆಹಲಿಯಿಂದ ಓಡಿಸುತ್ತೇನೆ : ಮೋದಿಗೆ ಕೆಸಿಆರ್ ವಾರ್ನಿಂಗ್

ಜನಗಾಂವ್, ಫೆ.12- ನಾನು ಹುಲಿಯ ಮಗ, ನನ್ನನ್ನು ಕೆಣಕಬೇಡಿ, ಕೆಣಕಿದರೆ ದೆಹಲಿಯ ಅಧಿಕಾರದ ಗದ್ದುಗೆಯಿಂದ ನಿಮ್ಮನ್ನು ಓಡಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಜನಗಾಂವ್‍ನಲ್ಲಿ ಜಿಲ್ಲಾಧಿಕಾರಿ ನೂತನ ಕಚೇರಿಯನ್ನು ಉದ್ಘಾಸಿದ ಬಳಿಕ ಸಾರ್ವಜನಿಕ ಸಮಾವೇಶನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಹೋರಾಟಕ್ಕೆ ಸಿದ್ಧನಿದ್ದೇನೆ. ನೀವು ನನ್ನ ವಿರುದ್ಧ ಟೀಕೆ ಮಾಡಿರುವುದನ್ನು ನೋಡಿದ್ದೇನೆ. ದೆಹಲಿಯ ಕೋಟೆಗೆ ಬಿರುಗಾಳಿಯಾಗಲು ಸಿದ್ಧನಾಗಿದ್ದೇನೆ. ಎಚ್ಚರವಿರಲಿ ಮೋದಿ ಅವರೆ ನಾನು ಹುಲಿಯ ಮಗ ಎಂದಿದ್ದಾರೆ. ಅಗತ್ಯವಾದರೆ ನಾನು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡಲು […]