ಕೊತ ಕೊತ ಕುದಿಯಲಿದೆ ಕರ್ನಾಟಕ, ಹವಾಮಾನ ತಜ್ಞರ ಮುನ್ಸೂಚನೆ..!

ಬೆಂಗಳೂರು,ಫೆ.24-ಕರ್ನಾಟಕದಲ್ಲಿ ಅವಗೂ ಮೊದಲೇ ಬೇಸಿಗೆ ಕಾಲಿಡಲಿದ್ದು, ತಾಪಮಾನ ದಿಢೀರ್ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.ಚಳಿಗಾಲದ ಅಂತ್ಯದ ನಡುವೆಯೇ ರಾಜ್ಯಕ್ಕೆ ಬೇಸಿಗೆ ಝಳ ಕಾಲಿಟ್ಟಿದ್ದು, ಅವಗೂ ಮೊದಲೇ ರಾಜ್ಯದಲ್ಲಿ ಬೇಸಿಗೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದೆ. ರಾಜ್ಯದಲ್ಲಿ ಸಾಮಾನ್ಯ ಮಾರ್ಚ್ 1ರ ಬದಲಿಗೆ ಫೆಬ್ರವರಿ 24ರಿಂದಲೇ ಬೇಸಿಗೆ ಆರಂಭವಾಗಲಿದ್ದು, ತಾಪಮಾನ ದಿಢೀರ್ ಏರಿಕೆ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಶುಷ್ಕ ಹವಾಮಾನದ ಮುನ್ಸೂಚನೆ ನೀಡಿದೆ. […]