ಉಗ್ರರ ಫ್ಯಾಕ್ಟರಿ ಪಾಕ್ ವಿರುದ್ಧ ಜೈಶಂಕರ್ ವಾಗ್ದಾಳಿ

ನಿಕೋಸಿಯಾ,ಡಿ.31- ನಮ್ಮೊಂದಿಗೆ ಸಂಧಾನಕ್ಕೆ ಒತ್ತಾಯಿಸಲು ಭಯೋತ್ಪಾದನೆಯನ್ನು ಸಾಧನವನ್ನಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಅವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೈಪ್ರಸ್‍ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಹೆಸರು ಉಲ್ಲೇಖಿಸದೆ ಪರೋಕ್ಷ ವಾಗ್ದಾಳಿ ನಡೆಸಿದರು. ಭಯೋತ್ಪಾದನೆಗೆ ಉತ್ತೇಜನ ನೀಡುವ ಮೂಲಕ ನಮ್ಮನ್ನು ಸಂಧಾನ ಮಾತುಕತೆಗೆ ಕರೆತರುವ ಅವರ ಒತ್ತಾಯಕ್ಕೆ ನಾವು ಎಂದು ಮಣಿಯುವುದಿಲ್ಲ. ನಾವು ಉತ್ತಮ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ ಎಂದರು. ನಮ್ಮ ಗಡಿಗಳಲ್ಲಿ […]