11 ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ

ತಿರುವನಂತಪುರಂ,ಸೆ.18- ಹಲವು ವಿವಾದ, ಟೀಕೆಗಳ ಹೊರತಾಗಿಯೂ ರಾಹುಲ್‍ಗಾಂಧಿ ಅವರ ಭಾರತ ಐಕ್ಯತಾ(ಭಾರತ್ ಜೋಡೋ) ಯಾತ್ರೆಯು ಸಾಂಗ್ಯವಾಗಿ ಮುಂದುವರೆದಿದ್ದು, 11ನೇ ದಿನದ ಯಾತ್ರೆಯು ಕೇರಳದ ಹರಿಪಾಡ್‍ನಿಂದ ಇಂದು ಶುರುವಾಗಿದೆ. ಮುಂಜಾನೆ 6.30ಕ್ಕೆ ಶುರುವಾದ ಯಾತ್ರೆ 13 ಕಿ.ಮೀ.ವರೆಗೂ ನಡೆದು, ವಟ್ಟಾಪಣ್ಣದ ಶ್ರೀ ಕುರುಟು ಭಗವತಿ ದೇವಸ್ಥಾನದ ಬಳಿ ವಿಶ್ರಾಂತಿ ಪಡೆಯಿತು. ಈ ವೇಳೆ ರಾಹುಲ್‍ಗಾಂ ಕುಟುನಾಡ್ ಹಾಗೂ ನೆರೆಯ ಜಿಲ್ಲೆಗಳ ರೈತರ ಜತೆ ಸಂವಾದ ನಡೆಸಿದರು. ಹಾದಿಯುದ್ಧಕ್ಕೂ ರಾಹುಲ್‍ಗಾಂಧಿ ಅವರ ಜತೆ ಸಾವಿರಾರು ಜನ ಹೆಜ್ಜೆಹಾಕಿದರು. ತಮ್ಮೊಂದಿಗೆ ಪಾದಯಾತ್ರೆಯಲ್ಲಿ […]