ವೀಕೆಂಡ್ ಕರ್ಫ್ಯೂ ಎಫೆಕ್ಟ್ , ಬೆಂಗಳೂರು ನಗರ ಸ್ಥಬ್ದ

ಬೆಂಗಳೂರು,ಜ.8-ಕೊರೊನಾ ಸೋಂಕು ತಡೆ ಉದ್ದೇಶದಿಂದ ಕರೆ ನೀಡಲಾಗಿರುವ ವಿಕೇಂಡ್ ಕಫ್ರ್ಯೂ ಪರಿಣಾಮ ಇಡಿ ಬೆಂಗಳೂರು ಸ್ಥಬ್ದಗೊಂಡಿದೆ.ಪ್ರತಿನಿತ್ಯ ಜನಜಂಗುಳಿಯಿಂದ ಕೂಡಿರುವ ಪ್ರದೇಶಗಳಾದ ಮೆಜೆಸ್ಟಿಕ್, ಮಲ್ಲೇಶ್ವರಂ, ಕೆ.ಆರ್.ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿವೆ. ತಾಸಿಗೊಂದು ಬಸ್ ವ್ಯವಸ್ಥೆ ಇರುವುದರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ.ಬೆರಳೇಣಿಕೆಯಷ್ಟು ಪ್ರಯಾಣಿಕರು ಮಾತ್ರ ಕಂಡು ಬರುತ್ತಿದ್ದು, ಬಸ್ ಸಿಗದೆ ಕೆಲವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಕಫ್ರ್ಯೂ ಬಗ್ಗೆ ತಿಳಿಯದ ಕೂಲಿ ಕಾರ್ಮಿಕರು ಬಸ್ ಇಲ್ಲದಿರುವುದನ್ನು ಕಂಡು ಬರಿಗಾಲಿನಲ್ಲೆ ತಮ್ಮ ಮನೆಗಳ ಕಡೆ ತೆರಳುತ್ತಿದ್ದ ದೃಶ್ಯ ಕಂಡು ಬಂತು.ಕೆಲವರಂತೂ […]