“ಯಾರ ಒತ್ತಡಕ್ಕೂ ಮಣಿಯುವುದಿಲ್ಲ, ತಜ್ಞರು ನೀಡುವ ಸಲಹೆಯಂತೆ ನಡೆದುಕೊಳ್ಳುತ್ತೇವೆ”

ಬೆಂಗಳೂರು,ಜ.17- ಹೋಟೆಲ್ ಮಾಲೀಕರು ಸೇರಿದಂತೆ ಯಾರ ಒತ್ತಡಕ್ಕೂ ಮಣಿಯಲಾಗದು. ತಜ್ಞರು ನೀಡುವ ಸಲಹೆಯಂತೆ ನಡೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೊ ಸ್ವಲ್ಪ ಲಾಭವಾಗುತ್ತದೆ ಎಂದು ರಿಲಾಕ್ಸ್ ಮಾಡಿ ಲಕ್ಷಾಂತರ ಜನರನ್ನು ಕಷ್ಟಕ್ಕೆ ದೂಡುವುದಿಲ್ಲ. ವೀಕೆಂಡ್ ಕಫ್ರ್ಯೂ ಮುಂದುವರೆಸುವ ಮನಸ್ಥಿತಿ ನಮಗೂ ಇಲ್ಲ. ಸೋಂಕು ಹೆಚ್ಚಳವಾಗುತ್ತಿರುವುದರಿಂದ ಮಾರ್ಗಸೂಚಿ ಪಾಲಿಸಬೇಕಾಗಿದೆ ಎಂದರು. ಸೋಂಕಿನ ಪ್ರಮಾಣ ಕಡಿಮೆಯಾದರೆ ರಿಲಾಕ್ಸ್ ಮಾಡಬಹುದು. ಸದ್ಯಕ್ಕೆ ಲಾಕ್‍ಡೌನ್ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ಬೇರೆ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ […]

ವೀಕೆಂಡ್ ಕರ್ಫ್ಯೂ ಎಫೆಕ್ಟ್ : ನಮ್ಮ ಮೆಟ್ರೋಗೆ ಭಾರಿ ನಷ್ಟ

ಬೆಂಗಳೂರು,ಜ.17 -ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರಿಂದ ಇದೀಗ ನಮ್ಮ ಮೆಟ್ರೋಗೆ ಕೋಟಿ ಕೋಟಿ ಆದಾಯ ನಷ್ಟವಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೂ, ಜನರ ತುರ್ತು ಸೇವೆಗೆ ಧಕ್ಕೆಯುಂಟು ಆಗಬಾರದು ಎಂಬ ಕಾರಣಕ್ಕೆ ಆಟೋ, ಬಸ್ ಮತ್ತು ಮೆಟ್ರೋ ಓಡಾಟಕ್ಕೆ ಅನುಮತಿ ನೀಡಲಾಗಿದೆ.ಮೆಟ್ರೋ ಕಾರ್ಯಾಚರಣೆ ಮಾಡಿದ್ರೂ ಆದಾಯ ಮಾತ್ರ ಬರ್ತಿಲ್ಲ. ವೀಕೆಂಡ್ ಕರ್ಫ್ಯೂನಲ್ಲಿ ಬೆಳಗ್ಗೆ 8ರಿಂದ ರಾತ್ರಿ 9ರವರಗೆ 20 ನಿಮಿಷಕ್ಕೊಮ್ಮೆ ಮೆಟ್ರೋ ಕಾರ್ಯಾಚರಣೆ ಆಗ್ತಿದೆ. ಆದರೂ ಆದಾಯ […]

ವೀಕೆಂಡ್ ಕರ್ಫ್ಯೂ ಮುಗಿಯುತ್ತಿದ್ದಂತೆ ಸಹಜ ಸ್ಥಿತಿಗೆ ಮರಳಿದ ಬೆಂಗಳೂರು

ಬೆಂಗಳೂರು,ಜ.10-ಎರಡು ದಿನಗಳಿಂದ ಸ್ತಬ್ಧಗೊಂಡಿದ್ದ ಬೆಂಗಳೂರು ಇಂದಿನಿಂದ ಸಹಜ ಸ್ಥಿತಿಗೆ ಮರುಳಿದೆ. ವೀಕೆಂಡ್ ಕರ್ಫ್ಯೂ ಅವಧಿ ಮುಗಿಯುತ್ತಿದ್ದಂತೆ ನಗರದಲ್ಲಿ ವಾಹನಗಳ ಓಡಾಟ ಆರಂಭಗೊಂಡಿದ್ದು, ರಸ್ತೆಗಳಲ್ಲಿ ಸಾಲು ಸಾಲು ವಾಹನಗಳು ಸಂಚರಿಸುತ್ತಿರುವ ದೃಶ್ಯ ಕಂಡು ಬಂದಿದೆ. ವೀಕೆಂಡ್ ಸಂದರ್ಭದಲ್ಲಿ ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‍ಗಳನ್ನು ಪೊಲೀಸರು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಂದ್ ಮಾಡಲಾಗಿದ್ದ ಮೇಲ್ಸೆತುವೆಗಳ ಮೇಲೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶುಕ್ರವಾರವೇ ಊರುಗಳತ್ತ ಮುಖ ಮಾಡಿದ್ದವರು ಹಳ್ಳಿಯಿಂದ ವಾಪಾಸ್ಸಾಗುತ್ತಿರುವುದರಿಂದ ಹೆದ್ದಾರಿಗಳಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದೆ. ವೀಕೆಂಡ್ […]