ವೀಕೆಂಡ್ ಕರ್ಫ್ಯೂ ತೆರವಿನಿಂದ ಜನರಿಗೆ ಅನುಕೂಲ

ಬೆಂಗಳೂರು, ಜ.22- ಕೊರೊನಾ ನಿಯಂತ್ರಣಕ್ಕಾಗಿ ವಿಸಿದ್ದ ವಾರಾಂತ್ಯ ಕಫ್ರ್ಯೂವನ್ನು ಸರ್ಕಾರ ರದ್ದುಗೊಳಿಸಿರುವ ಕ್ರಮದಿಂದ ಜನ ನಿರಾಳರಾಗಿದ್ದಾರೆ. ಕೊರೊನಾ ಕಟ್ಟಿಹಾಕಲು ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿದ್ದರಿಂದ ಜನ ವ್ಯಾಪಾರ-ವಹಿವಾಟು ಇಲ್ಲದೆ ಕಂಗೆಟ್ಟಿದ್ದರು. ವಾರಾಂತ್ಯದಲ್ಲಿ ವ್ಯಾಪಾರ-ವಹಿವಾಟು ನಡೆಸುವ ಪ್ರವಾಸೋದ್ಯಮ, ಬಾರ್ ಅಂಡ್ ರೆಸ್ಟೋರೆಂಟ್, ಹೊಟೇಲ್ಗಳು ಮತ್ತಿತರ ಉದ್ಯಮಗಳಿಗೆ ಕರ್ಫ್ಯೂನಿಂದ ಸಾಕಷ್ಟು ನಷ್ಟ ಉಂಟಾಗಿತ್ತು. ಇದೇ ಜನವರಿ 31ರ ವರೆಗೆ ವಾರಾಂತ್ಯ ಕರ್ಫ್ಯೂ ಮುಂದುವರೆಸುವುದಾಗಿ ಸರ್ಕಾರ ಹೇಳಿದ್ದರಿಂದ ಈ ವಲಯದವರು ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದಷ್ಟೇ ಅಲ್ಲದೆ ಬೀದಿಬದಿ […]