ರಾಜ್ಯಪಾಲರ ನಿರ್ಗಮನವನ್ನು ಸ್ವಾಗತಿಸಿ ಮಹಾರಾಷ್ಟ್ರ ನಾಯಕರು

ಮುಂಬೈ,ಫೆ.12- ರಾಜ್ಯಪಾಲರ ಸ್ಥಾನಕ್ಕೆ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಮುಖ್ಯಸ್ಥ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮೊದಲಿನ ರಾಜ್ಯಪಾಲ ಕೊಶ್ಯಾರಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ರಾಜ್ಯಪಾಲರನ್ನಾಗಿ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್‍ರನ್ನು ನೇಮಕ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಹಿಂದಿನವರಂತೆ ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ಭಾವಿಸುತ್ತೇನೆ. ಮಹಾ ವಿಕಾಸ್ ಅಘಾಡಿಯ […]

ಮಗುವಿನ ನಿರೀಕ್ಷೆಯಲ್ಲಿರುವ ದೇಶಿಯ ತೃತೀಯಲಿಂಗಿ ದಂಪತಿಗಳು

ಕಾಜಿಕೋಡ್,ಫೆ.4- ದೇಶದಲ್ಲೇ ಮೊದಲ ಬಾರಿಗೆ ಲಿಂಗ ಪರಿವರ್ತನೆಗೊಂಡ ಜೋಡಿ ನೈಸರ್ಗಿಕ ಕ್ರಮದ ಮೂಲಕ ಮಗು ಪಡೆಯುವ ಸನ್ನಾಹದಲ್ಲಿದ್ದು, ಮುಂದಿನ ತಿಂಗಳು ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ. ಕೇರಳದ ತೃತೀಯಲಿಂಗಿ ದಂಪತಿಗಳು ತಾವು ಮುಂದಿನ ತಿಂಗಳು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಘೋಷಿಸಿದ್ದಾರೆ. ಇದನ್ನು ದೇಶದಲ್ಲಿ ತೃತೀಯ ಲಿಂಗಿಗಳ ಮೊದಲ ಗರ್ಭಧಾರಣೆ ಎಂದು ಭಾವಿಸಲಾಗಿದೆ. ನೃತ್ಯಗಾರ್ತಿಯಾಗಿರುವ ಜಿಯಾ ಪಾವಲ್, ಇನ್ಸಟಾಗ್ರಾಮ್ ಪೋಸ್ಟ್ನಲ್ಲಿ ತಮ್ಮ ಪಾಲುದಾರರಾಗಿರುವ ಜಹಾದ್ ಈಗ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದ್ದಾರೆ. ಅವಳಿಗೆ ತಾಯಿಯಾಗುವ ಕನಸಿತ್ತು, ನನಗೆ ತಂದೆಯಾಗುವ […]

ಶೇ.10ರಷ್ಟು ಮೀಸಲಾತಿ : ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಕಾರ್ಯಕ್ಕೆ ಸಂದ ಜಯ

ನವದೆಹಲಿ,ನ.7- ಇಡಬ್ಲ್ಯುಎಸ್ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಧಾನಿ ನರೇಂದ್ರಮೋದಿಯವರ ಸಾಮಾಜಿಕ ನ್ಯಾಯದ ಕಾರ್ಯ ಯೋಜನೆಗೆ ದೊರೆತ ಜಯ ಎಂದು ಬಿಜೆಪಿ ವ್ಯಾಖ್ಯಾನಿಸಿದೆ. ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರತಿಕ್ರಿಯಿಸಿದ್ದು, ಮೀಸಲಾತಿ ಹೊರತಾದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಪ್ರಧಾನಿ ನರೇಂದ್ರಮೋದಿ ಸರ್ಕಾರದ ತೀರ್ಮಾನಕ್ಕೆ ಕಾನೂನಿನ ಬೆಂಬಲ ದೊರೆತಿದೆ ಎಂದಿದ್ದಾರೆ. ಸಾಮಾಜಿಕ ನ್ಯಾಯದಾನದಲ್ಲಿ ಇದು ಹೊಸ ದಿಕ್ಕನ್ನು ಆರಂಭಿಸುತ್ತಿದೆ. ಪ್ರಧಾನಿಯವರ ಗರೀಬ್ ಕಲ್ಯಾಣ್‍ಗೆ ಹೊಸ ಸೇರ್ಪಡೆ ಎಂದು ಹೇಳಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ […]

ಎಐಸಿಸಿ ಅಧ್ಯಕ್ಷ ಖರ್ಗೆ ಆಗಮನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಸಂಚಲನ

ಬೆಂಗಳೂರು,ನ.6- ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜ್ಯದವರೇ ಆದ ಮಲ್ಲಿ ಕಾರ್ಜುನ ಅವರು ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಲ್ಲಿಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಖರ್ಗೆ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಜಮೀರ್ ಅಹಮದ್ ಖಾನ್ ಸೇರಿದಂತೆ ಎಲ್ಲ ನಾಯಕರು ವಿಮಾನ ನಿಲ್ದಾಣದಲ್ಲಿಯೇ ಸ್ವಾಗತ ಕೋರಿದರು. ಅಲ್ಲಿಂದ ಖರ್ಗೆ […]