ಕೈಕೊಟ್ಟ ವಾಟ್ಸಾಪ್, ಬಳಕೆದಾರರ ಕಂಗಾಲು

ನವದೆಹಲಿ,ಅ.25- ವಾಟ್ಸ್‍ಅಪ್ ಅಪ್ಲಿಕೇಶನ್‍ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ದೇಶದಲ್ಲಿ ಕೆಲ ಕಾಲ ಸಂದೇಶ ರವಾನೆ ಮತ್ತು ಸ್ವೀಕಾರಕ್ಕೆ ಅಡಚಣೆಯಾಗಿ ಬಳಕೆದಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಜಾಗತಿಕವಾಗಿ ನಂ.1 ಸ್ಥಾನದಲ್ಲಿರುವ ವಾಟ್ಸ್‍ಅಪ್‍ನ ಪೋಷಕ ಸಂಸ್ಥೆ ಮೀಟ ತಾಂತ್ರಿಕ ಅಡಚಣೆಯನ್ನು ಖಚಿತಪಡಿಸಿದೆ. ವಾಟ್ಸ್‍ಅಪ್‍ನಲ್ಲಿ ಸಂದೇಶ ಕಳುಹಿಸಲಾಗದೆ ಇರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಅದನ್ನು ಸರಿಪಡಿಸಲು ಶ್ರಮಿಸುತ್ತಿದ್ದೇವೆ. ಶೀಘ್ರವೇ ಎಲ್ಲವನ್ನೂ ಸಹಜ ಸ್ಥಿತಿಗೆ ತರುತ್ತೇವೆ. ತಾತ್ಕಾಲಿಕ ತೊಂದರೆಗೆ ವಿಷಾದ ವ್ಯಕ್ತಪಡಿಸುವುದಾಗಿ ಮೀಟ ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. “ಭಾರತಕ್ಕೆ ಮುಸ್ಲಿಂ ಪ್ರಧಾನಿ” ಟ್ವಿಟ್ಟರ್ […]