ಹ್ಯಾಂಡ್ ಲಾಕ್ ಮುರಿದು ದ್ವಿಚಕ್ರ ವಾಹನ ಕಳ್ಳತನ : ಆರೋಪಿ ಸೆರೆ

ಬೆಂಗಳೂರು, ಅ.29- ಮನೆಗಳ ಮುಂದೆ ನಿಲ್ಲಿಸಿದಂತಹ ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿ ಸುಮಾರು 7 ಲಕ್ಷ ರೂ. ಬೆಲೆ ಬಾಳುವ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಮಂಗಮ್ಮನ ಪಾಳ್ಯದ ನಿವಾಸಿ ಯಾಸಿನ್ ಪಾಷಾ(19) ಬಂಧಿತ ಆರೋಪಿ. ಈತ ತನ್ನ ಸಹಚರನೊಂದಿಗೆ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ. ಎಂದಿನಂತೆ ವಿದ್ಯಾರ್ಥಿಯೊಬ್ಬ ಕಾಲೇಜ್ […]