ಆಮೆಗತಿ ವೈಟ್ ಟ್ಯಾಪಿಂಗ್ ಕಾಮಗಾರಿ, BBMPಗೆ ವಾಹನ ಸವಾರರ ಹಿಡಿಶಾಪ

ರಮೇಶ್ ಪಾಳ್ಯ ಬೆಂಗಳೂರು,ನ.4- ತಿರುಪತಿ ತಿಮ್ಮಪ್ಪನ ದರ್ಶನ ಬೇಕಾದರೆ ಆದಷ್ಟು ಬೇಗ ಮಾಡಿ ಬರಬಹುದು. ಅದರೆ, ಯಶವಂತಪುರದಿಂದ ಮಲ್ಲೇಶ್ವರಂ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಗೋಳು ಮಾತ್ರ ಯಾರಿಗೂ ಬೇಡ. ಮೆಜೆಸ್ಟಿಕ್ನಿಂದ ಮಲ್ಲೇಶ್ವರಂ ಮಾರ್ಗವಾಗಿ ತುಮಕೂರಿಗೆ ಹೋಗುವ ಬಸ್ಗಳು ಸೇರಿದಂತೆ ಪ್ರತಿನಿತ್ಯ ಯಶವಂತಪುರ-ಮಲ್ಲೇಶ್ವರಂನ ಪ್ರಮುಖ ರಸ್ತೆಯಲ್ಲೇ ಸಾಗಬೇಕಿರುವುದರಿಂದ ಈ ರಸ್ತೆಯಲ್ಲಿ ದಿನನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಇಂತಹ ವಾಹನ ದಟ್ಟಣೆ ರಸ್ತೆಯಲ್ಲಿ ಬಿಬಿಎಂಪಿಯವರು ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ಅತಿ ಹೆಚ್ಚು […]