ಬೆಂಗಳೂರಲ್ಲಿ ಡಬಲ್ ಮರ್ಡರ್, ಪತ್ನಿ ಮತ್ತು ಅತ್ತೆಯನ್ನು ಕೊಚ್ಚಿ ಕೊಂದ ಪತಿ..!

ಬೆಂಗಳೂರು, ಫೆ.22-ಪತ್ನಿ ಮತ್ತು ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೂಡಲಪಾಳ್ಯದ ಸಂಜೀವಿನಿ ನಗರದ ಸುನಿತಾ (38) ಮತ್ತು ಎನ್‍ಆರ್ ಕಾಲೋನಿಯ ಸರೋಜಮ್ಮ (65) ಕೊಲೆಯಾದವರು. ಮೂಡಲಪಾಳ್ಯ ನಿವಾಸಿ ರವಿಕುಮಾರ್‍ಮೂಲತಃ ತೀರ್ಥಹಳ್ಳಿಯವರಾಗಿದ್ದು, 18 ವರ್ಷದ ಹಿಂದೆ ಸುನಿತಾ ಅವರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುನಿತಾ ಗೃಹಿಣಿಯಾಗಿದ್ದರು. ರವಿಕುಮಾರ್ ಈ ಹಿಂದೆ ಬೇಕರಿ ಇಟ್ಟುಕೊಂಡಿದ್ದು, ಇತ್ತೀಚೆಗೆ ಮುಚ್ಚಿದ್ದರು. ಎನ್‍ಆರ್ ಕಾಲೋನಿಯಲ್ಲಿ ವಾಸವಾಗಿದ್ದ ಸುನಿತಾ ಅವರ […]