ಪತ್ನಿ-ಮಗಳ ಮೇಲೆ ಬಿಸಿ ಎಣ್ಣೆ ಎರಚಿದ್ದ ಆರೋಪಿ ಸೆರೆ

ಬೆಂಗಳೂರು, ಫೆ.3- ಪತ್ನಿ-ಮಗಳ ಮೇಲೆ ಬಿಸಿ ಎಣ್ಣೆ ಸುರಿದು ಪರಾರಿಯಾಗಿದ್ದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲ್‍ಆರ್ ನಗರದ ನಿವಾಸಿ ಥಾಮಸ್(46) ಬಂಧಿತ ಆರೋಪಿ. ಈತನ ಪತ್ನಿ ಮನೆ ಕೆಲಸ ಮಾಡಿ, ಕಟುಂಬ ನಿರ್ವಹಿಸುತ್ತಾರೆ. ಕುಡಿತದ ಚಟ ಹೊಂದಿದ್ದ ಆರೋಪಿ ವಿನಾ ಕಾರಣ ಪತ್ನಿ ಮಗಳೊಂದಿಗೆ ಜಗಳವಾಡುತ್ತಿದ್ದನು. ಭಿನ್ನಾಭಿಪ್ರಾಯದಿಂದಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಜ.30ರಂದು ಆರೋಪಿ ಹೊರಗೆ ಹೋಗಿ ಅಡುಗೆ ಎಣ್ಣೆ ತೆಗೆದುಕೊಂಡು ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ-ಮಗಳು ಟಿವಿ ನೋಡುತ್ತಾ ಕುಳಿತ್ತಿದ್ದರು. ಆರೋಪಿ […]