ಎನ್‍ಡಿಆರ್‍ಎಫ್ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಮಾಡಲು ಯತ್ನ..?

ನವದೆಹಲಿ,ಜ.23-ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‍ಡಿಆರ್‍ಎಫ್)ಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಹ್ಯಾಕ್ ಮಾಡುವ ಯತ್ನ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪರಿಣತರು ಈ ವಿಷಯವನ್ನು ಪರಿಶೀಲಿಸುತ್ತಿದ್ದು, ಹ್ಯಾಂಡಲ್‍ಅನ್ನು ಶೀಘ್ರವೇ ಪುನರ್ ಸ್ಥಾಪನೆ ಮಾಡಲಾಗುವುದು ಎಂದು ಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹ್ಯಾಂಡಲ್ @NDRFHQ ಸಂಕ್ಷಿಪ್ತವಾಗಿ ಕೆಲವು ತತ್‍ಕ್ಷಣದ ಸಂದೇಶಗಳನ್ನು ಪೋಸ್ಟ್ ಮಾಡಿದ್ದು, ಈಗಾಗಲೇ ಪ್ರಕಟಿಸಿದ ಮೆಸೇಜ್‍ಗಳು ಲೋಡ್ ಆಗುತ್ತಿರಲಿಲ್ಲ. ಹೀಗಿದ್ದರೂ ಕೇಂದ್ರೀಯ ಪಡೆಯ ಅಕೃತ ಫೋಟೋ ಮತ್ತು ಬಯೋ ಡಿಸ್‍ಪ್ಲೇ ಗೋಚರವಾಗಿತ್ತು. ಎನ್‍ಡಿಆರ್‍ಎಫ್ ಮಾನವ ನಿರ್ಮಿತ […]