ಭಾರತ-ಅಮೆರಿಕಾ ನಡುವೆ ವ್ಯಾಪಾರ ವಹಿವಾಟು ಮತ್ತಷ್ಟು ಭದ್ರ

ವಾಷಿಂಗ್ಟನ್, ಫೆ.28- ಅಮೆರಿಕಾ ಹಾಗೂ ಭಾರತದ ನಡುವಿನ ವ್ಯಾಪಾರ ಒಪ್ಪಂದವನ್ನು ಸುಧಾರಿಸಲು, ಮಾನವ ಹಕ್ಕುಗಳ ರಕ್ಷಣೆ ಹಾಗೂ ಬಹುತ್ವದ ಪ್ರಾಮುಖ್ಯತೆಯನ್ನು ವೃದ್ಧಿಸಲು ತಾವು ಕೆಲಸ ಮಾಡುವುದಾಗಿ ಅಮೆರಿಕಾ ನಾಮನಿರ್ದೇಶಿತ ರಾಯಬಾರಿ ಎರಿಕ್ ಗಾರ್ಸೆಟ್ಟಿ ಭರವಸೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ನಾಮನಿರ್ದೇಶಿತ ಎರಿಕ್ ಅವರು ಮೊದಲ ಬಾರಿಗೆ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಪ್ರಮುಖ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾರತೀಯ ವಲಸಿಗರ ಹಿತ ರಕ್ಷಣೆಗೆ ಬಿಡೇನ್ ಆಡಳಿತ […]