ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಟೀಮ್ ಇಂಡಿಯಾ

ಅಹಮದಾಬಾದ್, ಮಾ. 13- ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ 4 ನೇ ಪಂದ್ಯವು ಡ್ರಾ ಆಗಿದ್ದು, ಸರಣಿಯಲ್ಲಿ 2-1ಯಿಂದ ಮುನ್ನಡೆ ಪಡೆದಿರುವ ಟೀಮ್ ಇಂಡಿಯಾವು ಸರಣಿಯನ್ನು ಗೆದ್ದುಕೊಂಡಿದೆ. ಐಸಿಸಿ ಆಯೋಜನೆಯ 2ನೇ ಟೆಸ್ಟ್ ಚಾಂಪಿಯನ್‍ಷಿಪ್‍ನ ಫೈನಲ್ ಹಂತಕ್ಕೆ ತಲುಪಲು ಈ ಭಾರತದ ಫಲಿತಾಂಶವು ನಿರ್ಣಾಯಕ ಆಗಿತ್ತಾದರೂ, ನ್ಯೂಜಿಲೆಂಡ್ ವಿರುದ್ಧ ಕ್ರಿಸ್ಟ್ ಚರ್ಚ್‍ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 2 ವಿಕೆಟ್‍ಗಳಿಂದ ವಿರೋಚಿತ ಸೋಲು ಕಂಡಿದ್ದರಿಂದ ಭಾರತ ತಂಡವು ಸತತ 2ನೇ ಬಾರಿಗೆ ಫೈನಲ್ ಹಂತಕ್ಕೇರಿದೆ. 4ನೇ ಟೆಸ್ಟ್‍ನ ದ್ವಿತೀಯ […]
ಆಸ್ಕರ್ ಗೆದ್ದಿರುವುದು ಖುಷಿ ತಂದಿದೆ : ರಾಜಮೌಳಿ

ನವದೆಹಲಿ, ಮಾ. 13- ಮಹೋನ್ನತ RRR ಸಿನಿಮಾದ ನಾಟು ನಾಟು ಗೀತೆಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸುತ್ತದೆ ಎಂದು ಮೊದಲಿನಿಂದಲೂ ನಿರೀಕ್ಷಿಸಿದ್ದೆವು, ಕೊನೆಗೂ ಹಾಲಿವುಡ್‍ನ ಗೀತೆಗಳಿಗೆ ಪ್ರಬಲ ಪೈಪೋಟಿ ನಡುವೆಯೂ ಆಸ್ಕರ್ ಪ್ರಶಸ್ತಿ ಬಂದಿರುವುದು ತುಂಬಾ ಸಂತಸ ತಂದಿದೆ ಎಂದು ನಿರ್ದೇಶಕ ರಾಜಮೌಳಿ ಸಂತಸ ಹಂಚಿಕೊಂಡಿದ್ದಾರೆ. ನಾಟು ನಾಟು ಗೀತೆಯ ಮೇಕಿಂಗ್ ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದು ಈ ಗೀತೆಗೆ ವಿಶ್ವದೆಲ್ಲೆಡೆ ಪ್ರಶಂಸೆಗಳ ಸುರಿಮಳೆಯೇ ಹರಿದುಬಂದಿತ್ತು. ಈಗಾಗಲೇ ಈ ಗೀತೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದ್ದು, ನಮಗೆ […]
ಬೆಂಗಳೂರು ಮೂಲದ ರಿಕಿಕೇಜ್‍ಗೆ 3ನೇ ಗ್ರ್ಯಾಮಿ ಪ್ರಶಸ್ತಿ ಗರಿ

ಲಾಸ್ ಏಂಜಲ್ಸ್,ಫೆ.6- ಭಾರತೀಯ ಮೂಲದ ಸಂಗೀತ ನಿರ್ದೇಶಕ ರಿಕಿಕೇಜ್ ಮೂರನೇ ಭಾರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದು, ಅದನ್ನು ತವರು ನೆಲಕ್ಕೆ ಸಮರ್ಪಿಸಿದ್ದಾರೆ. 65ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟವಾಗಿದೆ. ಬೆಂಗಳೂರು ಮೂಲದ ಅಮೆರಿಕಾ ಸಂಜಾತ ಸಂಗೀತಗಾರ ರಿಕಿಕೇಜ್, ತಮ್ಮ ಆಲ್ಬಂ ತಯಾರಿಕೆಗೆ ಸಹಕರಿಸಿದ ಬ್ರಿಟಿಷ್ ರಾಕ್ ಬ್ಯಾಂಡ್ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಡಿವೈನ್ ಟೈಡ್ಸ್ (ಆಧ್ಯಾತ್ಮಿಕ ಅಲೆಗಳು) ಶಿರ್ಷಿಕೆಯಡಿ ತಯಾರಿಸಿದ ಆಡಿಯೊ ಆಲ್ಬಮ್‍ನಲ್ಲಿ ಯಶಸ್ವಿ ಜೋಡಿ ಗ್ರಾಮಫೋನ್ ಟ್ರೋಫಿಯನ್ನು ಗಳಿಸಿದೆ. ಅತ್ಯುತ್ತಮ ಹೊಸ […]
ಪಂಜಾಬ್‍ನ ವೃದ್ಧನಿಗೆ ಒಲಿದ 5 ಕೋಟಿ ಬಂಪರ್ ಲಾಟರಿ

ಚಂಡೀಗಢ, ಜ.20- ಪಂಜಾಬ್‍ನ 88 ವರ್ಷದ ವೃದ್ಧರಿಗೆ ಲಾಟರಿಯಲ್ಲಿ 5 ಕೋಟಿ ರೂ. ಬಹುಮಾನ ಬಂದಿದೆ. ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ ಮಹಾಂತ್ ದ್ವಾರಕದಾಸ್ ಅವರಿಗೆ 5 ಕೋಟಿ ರೂ. ಮೊತ್ತದ ಮೊದಲ ಬಹುಮಾನ ಬಂದಿದೆ. ಜ.16ರಂದು ಪಂಜಾಬ್ ರಾಜ್ಯದ ಮಕರ ಸಂಕ್ರಾಂತಿ ಲಾಟರಿ ಫಲಿತಾಂಶ ಬಂದಿದ್ದು, ಇದರಲ್ಲಿ ದ್ವಾರಕದಾಸ್ ಅವರಿಗೆ 5 ಕೋಟಿ ರೂ. ಬಹುಮಾನ ಬಂದಿರುವುದಾಗಿ ಲಾಟರಿ ನಿರ್ವಹಣೆಯ ಸಹ ನಿರ್ದೇಶಕ ಪರಮ್‍ಸಿಂಗ್ ತಿಳಿಸಿದ್ದಾರೆ. ರಕ್ಷಣಾ ವೆಚ್ಚ ಹೆಚ್ಚಿಸಿ ಶತ್ರಗಳಿಗೆ ಪ್ರತಿಸವಾಲು ಎಸೆದ […]
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ RRR ಸಿನಿಮಾದ ನಾಟು ನಾಟು ಹಾಡು

ನವದೆಹಲಿ,ಜ.11- ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಅಮೆರಿಕದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿದ್ದ ಆರ್‌ಆರ್‌ಆರ್ ಚಿತ್ರ ನಾಟು ನಾಟು ಹಾಡಿಗಾಗಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ, ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ ಪ್ರಶಸ್ತಿಯಲ್ಲಿ ಎಡವಿದೆ. ಈ ವಿಭಾಗದಲ್ಲಿ ಅರ್ಜೆಂಟೈನಾ ಸಿನಿಮಾ ಪ್ರಶಸ್ತಿ ಗೆದ್ದಿದೆ. ಸಮಾರಂಭದಲ್ಲಿ ಹಾಜರಿದ್ದ ರಾಜಮೌಳಿ, ಜೂ.ಎನ್‍ಟಿಆರ್, ರಾಮಚರಣ್ ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ ಮತ್ತಿತರರು ಪ್ರಶಸ್ತಿ […]
ಬಿಜೆಪಿ ಕೆಳಗಿಳಿಸಿ ದೆಹಲಿ ಪಾಲಿಕೆ ಚುಕ್ಕಾಣಿ ಹಿಡಿದ ಆಮ್‍ಆದ್ಮಿ

ನವದೆಹಲಿ, ಡಿ.7- ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿಯ ಮೂರು ಅವಧಿಗಳ ಆಡಳಿತವನ್ನು ಹಿಂದಿಕ್ಕಿ ಅಮ್‍ಆದ್ಮಿ ಪಕ್ಷ ಭರ್ಜರಿ ಬಹುಮತದಿಂದ ಅಧಿಕಾರ ಹಿಡಿದಿದೆ. ದೇಶದ ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯಲ್ಲಿನ 250 ಸ್ಥಾನಗಳಿದ್ದು, ಅಧಿಕಾರ ಹಿಡಿಯಲು 126 ಸ್ಥಾನಗಳನ್ನು ಗೆಲ್ಲಬೇಕಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಅಮ್ ಆದ್ಮಿಪಕ್ಷಗಳ ನಡುವೆ ರೋಚಕ ಪೈಪೊಟಿ ಮುಂದುವರೆದಿತ್ತು. ಅಮ್‍ಆದ್ಮಿ ಪಕ್ಷ 134 ಕ್ಷೇತ್ರಗಳಲ್ಲಿ ಗೆಲುವ ಮೂಲಕ ಸ್ಪಷ್ಟ […]
ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ

ಬೀಜಿಂಗ್, ಅ.22- ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕ್ಸಿ ಜಿನ್‍ಪಿಂಗ್ ಪುನರಾಯ್ಕೆಯಾಗಿದ್ದು, ತನ್ಮೂಲಕ ಚೀನಾದ ಅಧ್ಯಕ್ಷರಾಗಿ ಮೂರನೇ ಧಿಅವಗೆ ಮುಂದುವರೆದಿದ್ದಾರೆ. ಕ್ಸಿ ಜಿನ್‍ಪಿಂಗ್‍ಗಾಗಿ ಪಕ್ಷದ ಸಂವಿಧಾನವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. 68 ವರ್ಷ ಮೇಲ್ಪಟ್ಟವರು ಅಧಿಕಾರದ ರಾಜಕಾರಣದಿಂದ ನಿವೃತ್ತರಾಗಬೇಕು, ಎರಡು ಅವಧಿಗೆ ಮಾತ್ರ ಸಂವಿಧಾನಿಕ ಹುದ್ದೆಗಳನ್ನು ನಿಭಾಯಿಸಬಹುದು ಎಂಬ ನಿಯಮ ಬದಲಾವನೆಯಾಗಿದೆ. 69 ವರ್ಷದ ಕ್ಸಿ ಜಿನ್‍ಪಿಂಗ್ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಈಗಾಗಲೇ ಎರಡು ಅವಧಿಗೆ ಅಧ್ಯಕ್ಷರಾಗಿ ಕ್ಸಿ ಆಡಳಿತ ನಡೆಸಿದ್ದಾರೆ. ಇತ್ತೀಚೆಗೆ ಭ್ರಷ್ಟಚಾರದ ಆರೋಪಗಳಿಗಾಗಿ ಚೀನಾದ ಉನ್ನತಾಧಿಕಾರಿಗಳು […]
BGI NEWS: ಎಐಸಿಸಿ ಚುನಾವಣೆಯಲ್ಲಿ ಎಂಟು ಸಾವಿರ ಮತಗಳಿಂದ ಖರ್ಗೆ ಗೆಲುವು

ನವದೆಹಲಿ,ಅ.19- ಎಐಸಿಸಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸುಮಾರು ಎಂಟು ಸಾವಿರ ಮತಗಳನ್ನು ಪಡೆಯುವ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ. 137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಇದೇ 15ರಂದು ಚುನಾವಣೆ ನಡೆದಿತ್ತು. ದೇಶಾದ್ಯಂತ 9500ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್‍ನ ಪ್ರತಿನಿಧಿಗಳು ಮತದಾನ ಮಾಡಿದ್ದರು. ಇಂದು ಬೆಳಗ್ಗೆ 10.20ರಿಂದ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮತ ಎಣಿಕೆ ಆರಂಭವಾಯಿತು. ಚುನಾವಣೆಯಲ್ಲಿ ಮಲ್ಲಿಕಾರ್ಜುನಖರ್ಗೆ ಮತ್ತು ಶಶಿತರೂರ್ ಅವರು ಸ್ರ್ಪಧಿಸಿದ್ದರು. ನಿರೀಕ್ಷೆಯಂತೆ ಮಲ್ಲಿಕಾರ್ಜುನ ಖರ್ಗೆ […]
ಶ್ರೀಲಂಕಾದ ಕರುಣ ತಿಲಕರಿಗೆ ಬೂಕರ್ ಪ್ರಶಸ್ತಿ

ಲಂಡನ್.ಅ.18- ಶ್ರೀಲಂಕಾದ ಲೇಖಕ ಶೆಹನ್ ಕರುಣ ತಿಲಕ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಂದಿದೆ. ಛಾಯಾಗ್ರಾಹಕ ಯುದ್ಧದ ಚಿತ್ರಗಳನ್ನು ತೆಗೆದು ಸಾವನ್ನಪ್ಪಿದ ನಡುವಿನ ಕ ಥೆ ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ ಮೀಡಾ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ. 2019ರ ನಂತರ ಇದೇ ಮೊದಲ ಬಾರಿಗೆ ನೇರವಾಗಿ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರಶಸ್ತಿಯ ಜೊತೆಗೆ 50,000 ಪೌಂಡ್ ಬಹುಮಾನ ಸಿಕ್ಕಿದೆ. 1990ರ ದಶಕದ ಕಥಾ ಹಂದರವನ್ನು ಈ ಕಾದಂಬರಿ ಒಳಗೊಂಡಿದೆ. ಈ ಕಥನದ […]
ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!
ತಿರುವನಂತಪುರ.ಸೆ.19- ಅದೃಷ್ಠ ಒಲಿದರೆ ಕುಚೇಲನು ಕ್ಷಣ ಮಾತ್ರದಲ್ಲೇ ಕುಬೇರನಾಗುತ್ತಾನೆ ಎಂಬ ಮಾತಿನಂತೆ ಎಲ್ಲರೂ ನಿಬ್ಬೆರಗಾಗುವಂತೆ ಇಲ್ಲಿನ ಆಟೋ ಚಾಲಕನೊಬ್ಬನಿಗೆ 25 ಕೋಟಿ ರೂ ಲಾಟರಿ ಹೊಡೆದಿದೆ. ಶ್ರೀವರಾಹಂ ಮೂಲದ ವೃತ್ತಿಯಲ್ಲಿ ಬಾಣಸಿಗನಾದ ಅನೂಪ್‍ಗೆ ಅದೃಷ್ಠ ಒಲಿದು ಬಂದಿದ್ದು ಈಗ ಆತನ ಖುಷಿಗೆ ಪಾರವೇ ಇಲ್ಲದಂತಾಗಿದೆ. ಕೆಲ ದಿನದ ಹಿಂದೆ ಮಲೇಷಿಯಾಕ್ಕೆ ಹೋಗಿ ಬಾಣಸಿಗನಾಗಿ ಕೆಲಸ ಮಾಡಲು ಬ್ಯಾಂಕ್‍ಯೊಂದರಲ್ಲಿ 3 ಲಕ್ಷ ಸಾಲಕ್ಕೆ ಅರ್ಜಿ ಹಾಕಿದ್ದ ಅನೂಪ್‍ಗೆ ಭಾನುವಾರ ಡ್ರಾ ಆದ ಕೇರಳದ ಓಣಂ ಲಾಟರಿಯಲ್ಲಿ ಬರೋಬ್ಬರಿ 25 […]